Tuesday, March 28, 2023
HomeGauribidanurGauribidanur - ಗಣರಾಜ್ಯೋತ್ಸವ ದಿನಾಚರಣೆ

Gauribidanur – ಗಣರಾಜ್ಯೋತ್ಸವ ದಿನಾಚರಣೆ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರು ನಗರ ಹೊರವಲಯದ ನೇತಾಜಿ ಕ್ರೀಡಾಂಗಣದಲ್ಲಿ (Netaji Stadium) ತಾಲ್ಲೂಕು ‌ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ (Republic Day) ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಸ್ವಾತಂತ್ರ ಪಡೆದ ನಂತರ ದೇಶದ ಎಲ್ಲ ಚಿಂತಕರು, ತತ್ವಜ್ಞಾನಿಗಳು ಸೇರಿ ಪ್ರಗತಿಯ ಹಾದಿಯತ್ತ ಕೊಂಡೊಯ್ಯಲು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಳವಡಿಸಿದರು. ಅದರ ಮೂಲ ಆಶಯಗಳಿಗೆ ಪೂರಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ ಬಾಳುವ ಮೂಲಕ ಎಲ್ಲೆಡೆ ಸಾಮರಸ್ಯದ ವಾತಾವರಣ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಚ್. ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಎಸ್. ರೂಪಾ, ಉಪಾಧ್ಯಕ್ಷೆ ಭಾಗ್ಯಮ್ಮ, ತಾ.ಪಂ ಇ.ಒ ಆರ್. ಹರೀಶ್, ನಗರಸಭೆ ಪೌರಾಯುಕ್ತ ವಿ. ಸತ್ಯನಾರಾಯಣ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಹದೇವಸ್ವಾಮಿ, ಸಿಪಿಐ ಎಸ್.ಡಿ. ಶಶಿಧರ್, ಬಿಇಒ ಕೆ.ವಿ. ಶ್ರೀನಿವಾಸಮೂರ್ತಿ, ಕಸಾಪ ಅಧ್ಯಕ್ಷ ಟಿ. ನಂಜುಂಡಪ್ಪ, ಸೇವಾದಳದ ಬಾಲಪ್ಪ, ಸಿ.ಕೆ‌. ಆದರ್ಶಕುಮಾರ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಮೋಹನ್, ಆದಿನಾರಾಯಣಪ್ಪ, ಮುಖಂಡರಾದ ಮೋಹನ್, ಕೆ. ಪ್ರಭಾ, ಡಿ.ಜೆ. ಚಂದ್ರಮೋಹನ್, ವಿ. ರಮೇಶ್, ಮಂಜುಳಾ, ರಫೀಕ್ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!