Gauribidanur : ಗೌರಿಬಿದನೂರು ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಇತ್ತೀಚೆಗೆ ನಗರದಲ್ಲಿ 75 ವರ್ಷ ಆಗಿರುವ 50ಕ್ಕೂ ಹೆಚ್ಚು ನಿವೃತ್ತ ನೌಕರರನ್ನು (Retired Employees) ಸನ್ಮಾನಿಸಲಾಯಿತು (Honor).
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ” ತಾಲ್ಲೂಕಿನಲ್ಲಿ ನಿವೃತ್ತ ನೌಕರರ ಸಂಘವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ನಿವೇಶನ ನೀಡಿ ಕಚೇರಿ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡಲಾಗುವುದು. ನಿವೃತ್ತ ನೌಕರರು ವಯಸ್ಸಾಗಿದೆ ಎಂದು ಎದೆಗುಂದದೆ ಆಧ್ಯಾತ್ಮಿಕ ಜೀವನ, ಯೋಗ, ವ್ಯಾಯಾಮ ಸೇರಿದಂತೆ ಇತರ ಚಟುವಟಿಕೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಆರೋಗ್ಯವಾಗಿರಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಸ್ತಗಿರಿ ಸಾಬ್, ನಿವೃತ್ತ ಉಪನಿರ್ದೇಶಕ ಟಿ.ಅಶ್ವತ್ಥರೆಡ್ಡಿ, ತಾಲ್ಲೂಕು ಖಜಾನಾಧಿಕಾರಿ ಚೈತ್ರ, ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ.ಕೃಷ್ಣ, ಗೌರವಾಧ್ಯಕ್ಷ ಆವುಲಪ್ಪ, ಉಪಾಧ್ಯಕ್ಷ ಪಿ.ನಾರಾಯಣರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಂಜೀವರಾಯಪ್ಪ, ಖಜಾಂಚಿ ಬಿ.ಗಂಗಾಧರಯ್ಯ, ಸದಸ್ಯರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur