Gauribidanur : ಗೌರಿಬಿದನೂರು ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ 2020-21ನೇ ಸಹಕಾರಿ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಉದ್ದೇಶಗಳಿಗಾಗಿ ಬ್ಯಾಂಕಿನಲ್ಲಿ ಸಾಲ ಪಡೆದು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದ ಷೇರುದಾರರನ್ನು ಸನ್ಮಾನಿಸಲಾಯಿತು.
ಬ್ಯಾಂಕಿಗೆ ಸ್ವಂತ ಕಟ್ಟಡ ಬೇಕಾಗಿರುವ ವಿಷಯವನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬ್ಯಾಂಕ್ ಸಾಲದ ಸೌಲಭ್ಯಗಳನ್ನು ನೀಡಿ ಅವರ ಕುಟುಂಬಗಳಿಗೆ ಆಸರೆಯಾಗಿದೆ. ಹೆಚ್ಚಿನ ಠೇವಣಿದಾರರು ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಉಳಿತಾಯ ಮಾಡಬಹುದಾಗಿದೆ. ಕಳೆದ ವರ್ಷವು ಬ್ಯಾಂಕಿನ ಆರ್ಥಿಕ ವ್ಯವಹಾರದಲ್ಲಿ ₹ 8.75 ಲಕ್ಷ ನಷ್ಟದಲ್ಲಿದ್ದು, ಈ ಪ್ರಸಕ್ತ ವರ್ಷದಲ್ಲಿ ಸಾಲದ ಮರುಪಾವತಿ ಪಡೆದು ಬ್ಯಾಂಕನ್ನು ಆರ್ಥಿಕ ಅಭಿವೃದ್ಧಿಯತ್ತ ಕಡೆದೊಯುವ ಯೋಜನೆ ಹೊಂದಿದ್ದೇವೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಸಿ.ಎನ್.ಪ್ರಕಾಶ್ ತಿಳಿಸಿದರು.
ವಾರ್ಷಿಕ ಆರ್ಥಿಕ ವಹೀವಾಟಿನ ಆದಾಯ ಮತ್ತು ಖರ್ಚಿನ ಬಗ್ಗೆಗಿನ ಮಾಹಿತಿಯನ್ನು ಸಭೆಗೆ ಬ್ಯಾಂಕಿನ ವ್ಯವಸ್ಥಾಪಕರಾದ ಜಿ.ಆರ್.ವೇಣುಗೋಪಾಲ್ ನೀಡಿದರು.
ಸಭೆಯಲ್ಲಿ Gauribidanur Rural Development Bank ನ ಉಪಾಧ್ಯಕ್ಷರಾದ ಕೆ.ಶಶಿಕಲ, ನಿರ್ದೇಶಕರಾದ ಬಿ.ಎಚ್.ಜ್ಞಾನೇಶ್ವರಿ, ಮುದ್ದುಗಂಗಮ್ಮ, ಕೆ.ಎನ್.ವೆಂಕಟರಾಮರೆಡ್ಡಿ, ಟಿ.ಎಂ.ಚಿಕ್ಕಣ್ಣ, ಬಿ.ಎನ್.ಲಕ್ಷ್ಮೀಪತಿ, ಎಚ್.ಎಂ.ಶಿವಶಂಕರ್, ಎನ್.ನರಸಿಂಹಪ್ಪ, ವೀರಣ್ಣ, ಬ್ಯಾಂಕಿನ ಸಿಬ್ಬಂಧಿ ಬಿ.ಎಸ್.ಮಂಜುಳಾ, ಯಲ್ಲಪ್ಪ, ಹರ್ಷಿತ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur