Home News Gauribidanur ಬಾರ್, ರೆಸ್ಟೊರೆಂಟ್ ಮೇಲೆ ತಹಶೀಲ್ದಾರ್ ದಾಳಿ

ಬಾರ್, ರೆಸ್ಟೊರೆಂಟ್ ಮೇಲೆ ತಹಶೀಲ್ದಾರ್ ದಾಳಿ

0
471
Chikkaballapur Gauribidanur Tahsildar Plastic raid

Gauribidanur : ಗೌರಿಬಿದನೂರು ನಗರದಲ್ಲಿನ ಬಾರ್, ವೈನ್ಸ್, ರೆಸ್ಟೊರೆಂಟ್ ಮತ್ತು ಚಾಟ್ಸ್ ಅಂಗಡಿಗಳ ಮೇಲೆ ಸೋಮವಾರ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಹಾಗೂ ನಗರಸಭೆ ಆಯುಕ್ತೆ ಡಿ.ಎಂ. ಗೀತಾ, ಕಂದಾಯ ಮತ್ತು ನಗರಸಭೆ ಸಿಬ್ಬಂದಿ ದಿಢೀರ್ ದಾಳಿ ಮಾಡಿ ನಿಷೇಧಿತ ಪ್ಲಾಸ್ಟಿಕ್ (Plastic) ವಸ್ತುಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ (Fine) ವಿಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ , ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯನ್ನು ಪ್ಲಾಸ್ಟಿಕ್ ‌ಮುಕ್ತ ಮಾಡಲು ತಾಲ್ಲೂಕಿನ ವಿವಿಧೆಡೆ ಅಕ್ರಮವಾಗಿ ಮಾರುವ ಮತ್ತು ಬಳಸುತ್ತಿರುವ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು, ದಂಡ ವಿಧಿಸಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗಿ ಪರಿಸರ ಮಲಿನಗೊಂಡಿದೆ. ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಲಾಗಿದ್ದು ಅಂಗಡಿ‌ ಮಾಲೀಕರು ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ ಗೌರಿಬಿದನೂರು ತಾಲ್ಲೂಕನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಹಕರಿಸಬೇಕು ಎಂದು ತಿಳಿಸಿದರು.

ನಗರಸಭೆ ಹಿರಿಯ ಆರೋಗ್ಯ ‌ನಿರೀಕ್ಷಕ ಎನ್.ವಿ.ಶಿವಣ್ಣ, ಕಂದಾಯ ಅಧಿಕಾರಿಗಳಾದ ರವಿ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!