Home News Gauribidanur ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

0
264
Gauribidanur Atal Bihari Vajapayee Residential School Teacher Recruitment

Gauribidanur : ಗೌರಿಬಿದನೂರು ತಾಲ್ಲೂಕಿನ ಮರಳೂರು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ (Atal Bihari Vajapayee Residential School) ಕನ್ನಡ ಭಾಷಾ ಶಿಕ್ಷಕ, ಹಿಂದಿ ಭಾಷಾ ಶಿಕ್ಷಕ, ವಿಜ್ಞಾನ ವಿಷಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಮತ್ತು ಶುಶ್ರೂಷಕರ , ಪ್ರಥಮ ದರ್ಜೆ ಸಹಾಯಕರು ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಗೌರವಧನ ಆಧಾರದಲ್ಲಿ ಭರ್ತಿ ಮಾಡಲು ಅರ್ಜಿ (Teacher Recruitment) ಆಹ್ವಾನಿಸಲಾಗಿದೆ.

ಶುಶ್ರೂಷಕರ ಹುದ್ದೆಗೆ ಜಿ.ಎನ್.ಎಂ ಅಥವಾ ಬಿ.ಎಸ್ಸಿ ನರ್ಸಿಂಗ್, ಪ್ರಥಮ ದರ್ಜೆ ಸಹಾಯಕರು ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಯಾವುದೇ ಪದವಿ ಮತ್ತು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅಥವಾ ಸಂಘದಿಂದ ಪಡೆದ ಕಾರ್ಯನುಭವವುಳ್ಳ ಒಂದು ವರ್ಷದ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ ಹೊಂದಿರಬೇಕು. ಶಿಕ್ಷಕರ ಹುದ್ದೆಗೆ ಟಿ.ಇ.ಟಿ, ಸ್ನಾತಕೋತ್ತರ ಪದವಿ ಹಾಗೂ ಅನುಭವುಳ್ಳ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನ. ಅರ್ಹ ಹಾಗೂ ಆಸಕ್ತರು, ಗೌರಿಬಿದನೂರು ತಾಲ್ಲೂಕಿನ ಮರಳೂರು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಅಥವಾ ಪ್ರಾಂಶುಪಾಲರ ಮೊ. 9343883501 ಸಂಪರ್ಕಿಸಬಹುದು ಎಂದು ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!