Gauribidanur: ಗೌರಿಬಿದನೂರ ನಗರದ ಕರೇಕಲ್ಲಹಳ್ಳಿಯ ಕುವೆಂಪು ನಗರದ ಮನೆಯಲ್ಲಿ ಬೀಗ ಮುರಿದು ಕಳ್ಳತನ ನಡೆದಿದೆ.
ಅನಂತ್ ಎಂಬುವವರ ಮನೆಯಲ್ಲಿ ಶುಕ್ರವಾರ ಕಳ್ಳರು ಚಿನ್ನದ ಓಲೆ ಹಾಗೂ ಎರಡು ಉಂಗುರ ದೋಚಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರ ಮನೆ ಎದುರು ಅಳವಡಿಸಿದ್ದ ವಿದ್ಯುತ್ ದೀಪವನ್ನೂ ಕಳ್ಳರು ಕಳವು ಮಾಡಿದ್ದರು ಎಂದು ಮನೆ ಮಾಲೀಕ ಅನಂತ್ ಮಾಹಿತಿ ನೀಡಿದರು.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.