Gauribidanur : ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಬುಧವಾರ ಕೃಷಿ ಇಲಾಖೆ (Department of Agriculture) ವತಿಯಿಂದ ತೊಗರಿ ಕ್ಷೇತ್ರೋತ್ಸವ (Togari crop field festival) ಆಯೋಜಿಸಲಾಗಿತ್ತು. ಉತ್ತಮ ಇಳುವರಿಯ ತೊಗರಿ ಬೆಳೆಯನ್ನು ಬೆಳೆದ ಪ್ರಗತಿಪರ ರೈತ ಎಚ್.ಎಸ್. ರಾಜಶೇಖರ ರೆಡ್ಡಿ ಅವರನ್ನು ಕೃಷಿ ಇಲಾಖೆಯ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ವಿಶ್ವನಾಥ್ “ರೈತರು ತಮ್ಮ ಫಲವತ್ತಾದ ಭೂಮಿಯಲ್ಲಿ ಮುಂಗಾರು ಬೆಳೆಗಳ ಜತೆಗೆ ತೊಗರಿ ಬೆಳೆಯುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಉತ್ತಮ ತಳಿಯ ತೊಗರಿ ಬೆಳೆ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ, ಕೃಷಿ ಅಧಿಕಾರಿಗಳ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ತೊಗರಿಯನ್ನು ಸೂಕ್ತ ಅಂತರ ಕಾಪಾಡಿಕೊಂಡು ಬಿತ್ತನೆ ಮಾಡುವ ಮೂಲಕ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಪಡೆಯಬಹುದು” ಎಂದು ಹೇಳಿದರು.
ಕೃಷಿ ಅಧಿಕಾರಿ ಹರಿನಾಥ್, ಜಯಣ್ಣ, ರಬ್ಬನಿಬಾಷಾ, ಅಶ್ವತ್ಥನಾರಾಯಣ, ಶಶಿಧರ್, ಗ್ರಾ. ಪಂ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಸಮೀನಾ ತಾಜ್, ಸ್ಥಳೀಯರಾದ ಗಂಗಾಧರಪ್ಪ, ಕುಮಾರಣ್ಣ, ನರೇಶ್, ಸೋಮು, ಸುರೇಶ್ ಮತ್ತಿತರರು ಉಪಸ್ಥಿರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur