ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರ ಮನವಿ

- Advertisement -
- Advertisement -

Gauribidanur : ಗೌರಿಬಿದನೂರು ತಾಲ್ಲೂಕಿನ ಅಲೀಪುರ, ಸೀಗಲಹಳ್ಳಿ, ಗುಂತಮಡುಗು ಕಾಮಗಾನಹಳ್ಳಿ, ಕೊಂಡಾಪುರ, ಗೆದರೆ, ಸಿಂಗಾನಹಳ್ಳಿ ಮತ್ತು ಕೆಂಕರೆ ಗ್ರಾಮದ ರೈತರು, ಸಾರ್ವಜನಿಕರು ರಸ್ತೆ ಸರಿಪಡಿಸುವಂತೆ (Repair Roads) ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್ ರವರಿಗೆ ಸೋಮವಾರ ಮನವಿ ಸಲ್ಲಿಸಿದರು (Villagers Request).

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಮಂಜುನಾಥ್ ರೆಡ್ಡಿ “ಕಳೆದ 30 ವರ್ಷಗಳಿಂದ ಅಲೀಪುರದಿಂದ ಕೆಂಕರೆ ಕ್ರಾಸ್‌ವರೆಗೆ ಸಂಪರ್ಕಿಸುವ ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲದೆ, ಸಾರ್ವಜನಿಕರು, ರೈತರು ಪರದಾಡುವಂತಾಗಿದ್ದು ಈಗ ಮಳೆಗಾಲ ಆರಂಭವಾಗಿದ್ದು ಮಕ್ಕಳು, ವಯೋವೃದ್ಧರು ಶಾಲೆ, ಆಸ್ಪತ್ರೆಗೆ ಈ ರಸ್ತೆಯಲ್ಲಿ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಲೋಕೋಪಯೋಗಿ ಇಲಾಖೆ ತ್ವರಿತವಾಗಿ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದರು.

ಲಕ್ಷ್ಮಿನಾರಾಯಣ್, ಶ್ರೀನಿವಾಸ್ ಗೌಡ, ಪ್ರವೀಣ್ ರೆಡ್ಡಿ, ಹರೀಶ್ ಕುಮಾರ್, ವಸಂತ್, ಸತೀಶ್ ನಾಗರಾಜ್, ಚಂದ್ರಶೇಖರ್, ಪವನ್, ಮಲ್ಲೇಶ್, ನಂಜಪ್ಪ ಮತ್ತಿತ್ತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!