Gauribidanur : ಗೌರಿಬಿದನೂರು ಚುನಾವಣಾ ಸಾಕ್ಷಾರತಾ ಕ್ಲಬ್, ಸ್ವೀಪ್ ಸಮಿತಿ, ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಸಹಯೋಗದಲ್ಲಿ ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜು ಆವರಣದಿಂದ ಗಾಂಧಿ ವೃತ್ತದವರೆಗೆ ಮತದಾನ ಜಾಗೃತಿ ಮೆರವಣಿಗೆ (Voting awareness Rally) ನಡೆಯಿತು.
ಈ ಸಂಧರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ನಾಗರಾಜಪ್ಪ ಮಾತನಾಡಿ, “ಸಮಾಜದಲ್ಲಿ ಬದಲಾವಣೆ ತರಬೇಕೆಂದು ಬಯಸಿದರೆ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಂದು ಮತವೂ ಅಭ್ಯರ್ಥಿ ಭವಿಷ್ಯದ ಜತೆಗೆ ಸಮಾಜದ ಭವಿಷ್ಯ ನಿರ್ಣಯಿಸುತ್ತದೆ” ಎಂದರು.
ಪ್ರಾಂಶುಪಾಲರಾದ ಡಾ.ಗಾಯತ್ರಿ, ಕಾಲೇಜಿನ ಆಡಳಿತ ಮಂಡಳಿ, ಸ್ವೀಪ್ ಸಿಬ್ಬಂದಿ,ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.