Gauribidanur : ತೋಟಗಾರಿಕೆ ಇಲಾಖೆ (Department Of Horticulture) ಹಾಗೂ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ (Karnataka Wine Board) ವತಿಯಿಂದ ಫೆಬ್ರವರಿ 24, 25, 26ಕ್ಕೆ ಗೌರಿಬಿದನೂರಿನಲ್ಲಿ ಪಿನಾಕಿನಿ ದ್ರಾಕ್ಷಾರಸ ಉತ್ಸವ (wine Festival).
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ ” ರೈತರು ಬೆಳೆದ ವಿವಿಧ ಬಗೆಯ ಹಣ್ಣುಗಳು ಸೂಕ್ತ ಬೆಲೆ ಇಲ್ಲದ ಸಮಯದಲ್ಲಿ ಕೊಳೆತು ಹಾಳಾಗುತ್ತವೆ. ರೈತರ ಹಿತದೃಷ್ಟಿಯಿಂದ ಈ ಮಂಡಳಿ ರಚನೆ ಮಾಡಿ ವಿವಿಧ ಬಗೆಯ ಹಣ್ಣುಗಳಿಂದ ವೈನ್ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಇಲಾಖೆಯಿಂದ ದ್ರಾಕ್ಷಾರಸ ಉತ್ಸವ ಆಯೋಜನೆ ಮಾಡಿ ರೈತರಿಗೆ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ. ಉತ್ಸವದಲ್ಲಿ 10ಕ್ಕೂ ಹೆಚ್ಚು ವೈನ್ ಕಂಪನಿಗಳು ಭಾಗವಹಿಸಿ ದ್ರಾಕ್ಷಾರಸದಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಲಾಗುವುದು. ರಾಜ್ಯ ಹಾಗೂ ಜಿಲ್ಲೆಯಿಂದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದ್ರಾಕ್ಷಿ ಮತ್ತು ವೈನ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು, ಮಂಡಳಿ ಪ್ರಧಾನ ವ್ಯವಸ್ಥಾಪಕ ಆರ್.ಎಸ್.ಸರ್ವೇಶ್ ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur