Monday, September 26, 2022
HomeGauribidanurವಿಶ್ವ ಜನಪದ ದಿನಾಚರಣೆ ಕಾರ್ಯಕ್ರಮ

ವಿಶ್ವ ಜನಪದ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರು ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Government First Grade College) ವತಿಯಿಂದ ವಿಶ್ವ ಜನಪದ ದಿನಾಚರಣೆ (World Folk Day) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N H Shivashankar Reddy) “ತಲೆಮಾರುಗಳ ಜನ ಸಂಸ್ಕೃತಿಯ ತಾಯಿ ಬೇರು ಜನಪದವಾಗಿದ್ದು ಆಧುನಿಕ ಯುಗದಲ್ಲಿ ಅದರ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಮೊದಲಿನಿಂದಲೂ ಗ್ರಾಮೀಣ ಭಾಗದಲ್ಲಿ ಜೀವಂತಿಕೆಯಲ್ಲಿರುವ ಜನಪದ ಕಲೆಯನ್ನು ಯುವ ಪೀಳಿಗೆ ಉಳಿಸಿ ಬೆಳೆಸಿದಾಗ ಮಾತ್ರ ಗ್ರಾಮೀಣ ಸೊಗಡು ಇರಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರ ತಮಟೆ ವಾದನ, ಮುಖವೀಣೆ ಅಂಜಿನಪ್ಪ ಅವರ ಮುಖವೀಣಾ ವಾದನ, ಚಂದ್ರಶೇಖರ್ ಮತ್ತು ಹರೀಶ್ ಅವರ ಮೂಲ ಜನಪದ ಮತ್ತು ತತ್ವಪದ, ಗುಣಶೀಲ, ಗೀತಾ ಹೆಗಡೆ, ಮಹಾಲಕ್ಕ್ಷ್ಮಿ ಯವರ ಲಾವಣಿ ಪದಗಳು ಮತ್ತು ಅನಿಲ್ ರವರ ತಂಡದಿಂದ ತಮಟೆ ವಾದ್ಯ ವಾದನ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.

ಪ್ರಾಂಶುಪಾಲ ಎಂ.ಶಿವಣ್ಣ, ಗೌತಮ ಬುದ್ದ ಸಂಸ್ಥೆಯ ಅಧ್ಯಕ್ಷ ಇಡಗೂರು ವೈ.ಟಿ.ಪ್ರಸನ್ನಕುಮಾರ್, ಉಪನ್ಯಾಸಕ ಪ್ರೊ.ಅಡಿವಪ್ಪ, ಬಿ.ಆರ್.ಗಂಗಾದರಯ್ಯ, ಬಿ.ಮಂಜುನಾಥ್, ಗಿರೀಶ್, ಜಕ್ಕೇನಹಳ್ಳಿ ಆರ್.ವೆಂಕಟಾಚಲ, ಶಿವಶಂಕರ್, ಕಿರಣ್, ಸಂತೋಷ್, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

error: Content is protected !!