Gauribidanur : ₹ 44.70 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹಣ ವ್ಯಾಪಾರಿಯೊಬ್ಬರ ಮನೆಯಿಂದ ಕಳ್ಳತನವಾಗಿರುವ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದ್ದು, ವ್ಯಾಪಾರಿ ಕಾರ್ತಿಕ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ ಅಭಿಲಾಷ್ ಲೇಔಟ್‌ನಲ್ಲಿ ಕಾರ್ತಿಕ್ ವಾಸವಾಗಿದದ್ದು, ತಾತನ ತಿಥಿ ಕಾರ್ಯಕ್ಕಾಗಿ ನ.9ರಂದು ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಕಳ್ಳತನ ಸಂಭವಿಸುದ್ದು, ಕಾರ್ತಿಕ್ ಅವರ ನೆರೆಮನೆಯ ಮಂಜುನಾಥ್ ಮಂಗಳವಾರ ಕರೆ ಮಾಡಿ ಮನೆಯ ಬಾಗಿಲು ತೆರೆದಿರುವ ವಿಷಯ ತಿಳಿಸಿದ್ದಾರೆ.
ಬಾಗಿಲನ್ನು ಮೀಟಿ ತೆರೆದಿರುವ ಕಳ್ಳರು ಮನೆಯ ಒಳಗೆ ಎರಡು ಬೀರುಗಳಲ್ಲಿದ್ದ ಸರ, ಓಲೆ, ನೆಕ್ಲಸ್ ಹಾಗೂ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 770 ಗ್ರಾಂ ಚಿನ್ನದ ಆಭರಣ, 7.810 ಕೆ.ಜಿ ಬೆಳ್ಳಿಯ ಆಭರಣ, ₹ 5.25 ಲಕ್ಷ ನಗದು ಸೇರಿದಂತೆ ಒಟ್ಟು ಮೌಲ್ಯ ₹ 44.70 ಲಕ್ಷದಷ್ಟು ಅಸ್ತಿ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.