Chikkaballapur, Karnataka : ರೈತರಿಗೆ ಸಂತಸದ ಸುದ್ದಿ! ಕೃಷಿ ಹೊಂಡದ ಸುತ್ತ ತಂತಿಬೇಲಿ ಅಳವಡಿಸಲು ಕೃಷಿ ಇಲಾಖೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 50% ಸಹಾಯಧನ, ಹಾಗು ಸಾಮಾನ್ಯ ವರ್ಗದ ರೈತರಿಗೆ 40% ಸಹಾಯಧನ ಲಭ್ಯವಿದೆ.
ಕೃಷಿ ಹೊಂಡದ ಅಳತೆಗೆ ಅನುಗುಣವಾಗಿ,
👉 ಸಾಮಾನ್ಯ ರೈತರಿಗೆ ₹7,600ರಿಂದ ₹14,800ರವರೆಗೆ,
👉 ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹9,500ರಿಂದ ₹18,500ರವರೆಗೆ ಸಹಾಯಧನ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಈ ಯೋಜನೆಗೆ ಆಸಕ್ತಿ ಇರುವ ರೈತರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬಹುದು.
ಜಿಲ್ಲೆಯಲ್ಲಿ ಇತ್ತೀಚಿನ ಮಳೆಯಿಂದ ಕೃಷಿ ಹೊಂಡಗಳು ಶೇ. 80ರಷ್ಟು ನೀರಿನಿಂದ ತುಂಬಿವೆ. ಸುರಕ್ಷತಾ ದೃಷ್ಟಿಯಿಂದ ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಸುವುದು ಹಾಗೂ ಎಚ್ಚರಿಕೆ ಫಲಕವನ್ನು ಹಾಕುವುದು ಕಡ್ಡಾಯ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
