Home Sidlaghatta ಹಳೆಯ ವಸ್ತುಗಳ ಇತಿಹಾಸ ತಿಳಿಸಿದ ಶಿಕ್ಷಕರು

ಹಳೆಯ ವಸ್ತುಗಳ ಇತಿಹಾಸ ತಿಳಿಸಿದ ಶಿಕ್ಷಕರು

0
628

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ (Appegowdanahalli Government School) ಶುಕ್ರವಾರ ಹಳ್ಳಿಯ ಹಲವಾರು ಪರಿಕರಗಳು, ಜಾನಪದ ಸಂಸ್ಕೃತಿಯನ್ನು (Folk, Culture) ಪ್ರತಿಬಿಂಬಿಸುವ ವಸ್ತುಗಳನ್ನೆಲ್ಲಾ (Articles) ಶಾಲೆಯ ಆವರಣದಲ್ಲಿ ಜೋಡಿಸಿಟ್ಟು, ಶಿಕ್ಷಕರು ಮಕ್ಕಳಿಗೆ ಪ್ರತಿಯೊಂದರ ಹೆಸರು, ಬಳಕೆ, ಉಪಯೋಗ ಹಾಗೂ ಅದರೊಟ್ಟಿಗಿನ ಅವರ ಬಾಲ್ಯದ ನೆನಪುಗಳನ್ನೆಲ್ಲಾ ಮೆಲುಕು ಹಾಕಿದರು.

ಕೈಅರಿವೆ, ಕಾಳುಕೂರಿಗೆ, ಪಿಕಾಸಿ, ವರಾರಿ, ಗರಗಸ, ಕೊಡತಿ, ಭತ್ತದ ಜರಡಿ, ಕುದುರು ಒನಕೆ, ಬೈರಿಗೆ, ಗಂಧದ ಕಲ್ಲು, ಗೊಟ್ಟ, ಕೈ ಒರಳು, ಕತ್ತಿ, ಬೀಸಣಿಗೆ, ನೊಗ, ಗೂಡಿ, ಮಕ್ಕರಿ, ಇಲಿಬೋನು, ಉಳಿ, ಕುಡಗೋಲು, ಕತ್ತುಪೀಠ, ಅರಿವೆ, ಟ್ರಂಕು, ಮರದ ಪೆಟ್ಟಿಗೆ, ಲ್ಯಾಂಪು, ಬೀಸುವ ಕಲ್ಲು, ಕೊಡಲಿ, ರಾಗಿ ಕೂರಿಗೆ, ತಕ್ಕಡಿ, ಕೈಬಾಚಿ, ಪಾವು, ಸೇರು ಪಡಿ, ಮಣ್ಣಿನ ದೀಪ, ಮಚ್ಚು, ಕುಟಾಣಿ, ಒರಳು ಕಲ್ಲು, ಮೊರಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು

“ನಮ್ಮ ಶಾಲೆಯಲ್ಲಿ ಕಲಿಕಾ ಚೇತರಿಕೆಯ ಭಾಗವಾಗಿ ಮಳ್ಳೆ ಬಿಲ್ಲು ಕಾರ್ಯಕ್ರಮದ ಅಡಿಯಲ್ಲಿ “ಇತಿಹಾಸ ತಿಳಿಯೋಣ” ಎಂಬ ವಿಷಯವಿಟ್ಟುಕೊಂಡು ಹಳ್ಳಿಗಳಲ್ಲಿ ರೈತಾಪಿ ಜನರು ಹಾಗೂ ಹಿಂದಿನವರು ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ಸಂಗ್ರಹಿಸಿ ಶಾಲೆಗೆ ತಂದು ಅವುಗಳ ಬಗ್ಗೆ ವಿವರಿಸಿದೆವು” ಎಂದು ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.

ಶಿಕ್ಷಕರಾದ ಎಸ್.ಚಾಂದ್ ಪಾಷ, ಎಂ.ಸುಜಾತ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದು ಮಕ್ಕಳಿಗೆ ಆ ಎಲ್ಲಾ ವಸ್ತುಗಳ ಮಹತ್ವ ಹಾಗೂ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

error: Content is protected !!