Gudibande : ಗುಡಿಬಂಡೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ತಟ್ಟಹಳ್ಳಿ ಕ್ರಾಸ್ ಕೋಮಲ್ ಗಾರ್ಡನ್ ಹೋಟೆಲ್ ಮುಂದೆ ಭಾನುವಾರ ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಅಪಘಾತ ನಡೆದಿದ್ದು ಅಪಘಾತದಲ್ಲಿ (Bike Car Accident) ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಯರ್ರಲಕ್ಕೇನಹಳ್ಳಿ ಗ್ರಾಮದ ಶಿವಪ್ಪ (35) ಹಾಗೂ ಅನಿಲ್ ಕುಮಾರ್ (26) ಟೊಮೆಟೊ ಗಿಡಗಳಿಗೆ ಔಷಧಿ ತರಲು ಬೈಕ್‌ನಲ್ಲಿ ಬಾಗೇಪಲ್ಲಿ ಕಡೆಗೆ ಹೋಗುತ್ತಿದ್ದಾಗ ಬೈಕ್‌ನ ಹಿಂಬದಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಒಬ್ಬರು ರಸ್ತೆ ಪಕ್ಕದಲ್ಲಿ ಮತ್ತೊಬ್ಬರು ಸುಮಾರು 100ಮೀಟರ್ ದೂರದಲ್ಲಿ ಬಿದ್ದಿದ್ದಾರೆ. ಕಾರಿನ ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.