Gudibande : ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ (Kannada Sahitya Parishat) ತಾಲ್ಲೂಕು ಅಧ್ಯಕ್ಷ (President) ಆಯ್ಕೆ ಕುರಿತು ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ಪಾಲ್ಗೊಂಡು ಗುಡಿಬಂಡೆ ತಾಲ್ಲೂಕೂ ಕಸಾಪ (KaSaPa) ಅಧ್ಯಕ್ಷರ ಆಯ್ಕೆ ಮಾಡಿದರು. ಬಿ.ಮಂಜುನಾಥ್, ಪ್ರೆಸ್ ಸುಬ್ಬರಾಯಪ್ಪ, ಸಾಹಿತಿ ಫಯಾಜ್ ಅಹಮದ್, ಶಿಕ್ಷಕ ವಿ. ಶ್ರೀರಾಮಪ್ಪ, ಒಳಗೊಂಡಂತೆ 6 ಮಂದಿ ಅಧ್ಯಕ್ಷರ ಆಕಾಂಕ್ಷಿಗಳಾಗಿದ್ದು ಮೊದಲ 30 ತಿಂಗಳಿಗೆ ಪ್ರೆಸ್ ಸುಬ್ಬರಾಯಪ್ಪ ಹಾಗೂ ನಂತರದ 30 ತಿಂಗಳಿಗೆ ಬಿ.ಮಂಜುನಾಥ್ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಂತರ ಮಾತನಾಡಿದ ಕೋಡಿ ರಂಗಪ್ಪ (Prof. Kodi Rangappa) “ಸಾಹಿತ್ಯ ಸೇವೆಯನ್ನು ಜಾತ್ಯತೀತವಾಗಿ ಮಾಡಬೇಕು. ಕಸಾಪದ ಅಧ್ಯಕ್ಷರ ಸ್ಥಾನ ಎಂಬುದು ದೊಡ್ಡ ಜವಾಬ್ದಾರಿಯಾಗಿದ್ದು ತಾಂತ್ರಿಕವಾಗಿ ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಲಾಗುತ್ತದೆ ಅಷ್ಟೆ” ಎಂದರು.
“ಕಸಾಪ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ್ದು ಸಂತಸ ತಂದಿದೆ, ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಕನ್ನಡಾಂಬೆಯ ಸೇವೆಯನ್ನು ಮಾಡುವ ಅವಾಕಾಶ ನನಗೆ ದೊರೆತ್ತಿದೆ. ಕಸಾಪ ಗೌರವ ಉಳಿಸುವ ಕೆಲಸ ಮಾಡುತ್ತೇನೆ” ಎಂದು ಪ್ರೆಸ್ ಸುಬ್ಬರಾಯಪ್ಪ ತಿಳಿಸಿದರು.
ಸಭೆಯಲ್ಲಿ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಹನುಮಂತರಾವ್, ತಾಲ್ಲೂಕು ಅಧ್ಯಕ್ಷರಾದ ಸ.ನ. ನಾಗೇಂದ್ರ, ಅನುರಾಧ ಆನಂದ್ ಮತಿತ್ತರರು ಪಾಲ್ಗೊಂಡಿದ್ದರು.