Gudibande : ಗುಡಿಬಂಡೆ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಹರೀಶ್ ಕೆ.ಎಂ. ನೇತೃತ್ವದಲ್ಲಿ ಲೋಕ ಅದಾಲತ್ (Lok Adalat) ಹಮ್ಮಿಕೊಳ್ಳಲಾಗಿತ್ತು.
ಅದಾಲತ್‌ನಲ್ಲಿ ಒಟ್ಟಾರೆ 328 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ಇದರಲ್ಲಿ ಏಳು ಚೆಕ್ ಬೌನ್ಸ್ ಪ್ರಕರಣ ಗಳಿಂದ ₹13.32 ಲಕ್ಷ ರೂಪಾಯಿ ಸಂದಾಯವಾಯಿತು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 23 ಪ್ರಕರಣಗಳಲ್ಲಿ 1.03 ಲಕ್ಷ ದಂಡ ವಸೂಲಿ ಆಯಿತು. 12 ಸಿವಿಲ್ ಪ್ರಕರಣಗಳಿಂದ ₹16.15 ಲಕ್ಷ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಲಾಯಿತು. 273 ಶಾಲಾ ಮಕ್ಕಳಿಗೆ ಜನನ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಗ್ಬತುಲ್ಲಾ, ವಕೀಲರ ಸಂಘದ ಅಧ್ಯಕ್ಷ ಟಿ. ಅಶ್ವತ್ ರೆಡ್ಡಿ, ಉಪಾಧ್ಯಕ್ಷ ಕೆ.ಆರ್ ಮಂಜುನಾಥ್, ಕಾರ್ಯದರ್ಶಿ ಸಿ.ವಿ. ಮಂಜುನಾಥ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಸಂದೀಪ್ ಉಪಸ್ಥಿತರಿದ್ದರು.