Home News Gudibande ಲೋಕ ಅದಾಲತ್ ನಲ್ಲಿ 30 ಲಕ್ಷ ಹಣ ಸಂಗ್ರಹ

ಲೋಕ ಅದಾಲತ್ ನಲ್ಲಿ 30 ಲಕ್ಷ ಹಣ ಸಂಗ್ರಹ

0
Gudibande Lok adalath

Gudibande : ಗುಡಿಬಂಡೆ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಹರೀಶ್ ಕೆ.ಎಂ. ನೇತೃತ್ವದಲ್ಲಿ ಲೋಕ ಅದಾಲತ್ (Lok Adalat) ಹಮ್ಮಿಕೊಳ್ಳಲಾಗಿತ್ತು.

ಅದಾಲತ್‌ನಲ್ಲಿ ಒಟ್ಟಾರೆ 328 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ಇದರಲ್ಲಿ ಏಳು ಚೆಕ್ ಬೌನ್ಸ್ ಪ್ರಕರಣ ಗಳಿಂದ ₹13.32 ಲಕ್ಷ ರೂಪಾಯಿ ಸಂದಾಯವಾಯಿತು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 23 ಪ್ರಕರಣಗಳಲ್ಲಿ 1.03 ಲಕ್ಷ ದಂಡ ವಸೂಲಿ ಆಯಿತು. 12 ಸಿವಿಲ್ ಪ್ರಕರಣಗಳಿಂದ ₹16.15 ಲಕ್ಷ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಲಾಯಿತು. 273 ಶಾಲಾ ಮಕ್ಕಳಿಗೆ ಜನನ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿಗ್ಬತುಲ್ಲಾ, ವಕೀಲರ ಸಂಘದ ಅಧ್ಯಕ್ಷ ಟಿ. ಅಶ್ವತ್ ರೆಡ್ಡಿ, ಉಪಾಧ್ಯಕ್ಷ ಕೆ.ಆರ್ ಮಂಜುನಾಥ್, ಕಾರ್ಯದರ್ಶಿ ಸಿ.ವಿ. ಮಂಜುನಾಥ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಸಂದೀಪ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version