Saturday, March 25, 2023
HomeGudibandeವಿದ್ಯಾರ್ಥಿಗಳಿಗೆ ’ಪ್ರಾಚ್ಯ ಪ್ರಜ್ಞೆ‘ ಸ್ಪರ್ಧೆ

ವಿದ್ಯಾರ್ಥಿಗಳಿಗೆ ’ಪ್ರಾಚ್ಯ ಪ್ರಜ್ಞೆ‘ ಸ್ಪರ್ಧೆ

- Advertisement -
- Advertisement -
- Advertisement -
- Advertisement -

Gudibande : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮೈಸೂರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ (Karnataka Archaeology Department) ವತಿಯಿಂದ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ’ಪ್ರಾಚ್ಯ ಪ್ರಜ್ಞೆ‘ (Oriental consciousness) ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರಾಚೀನ ಸ್ಮಾರಕ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಸ್ಕೃತಿ ಹಾಗೂ ಪರಂಪರೆ ಸಂಪತ್ತಿನ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಹಾಗೂ ಮಕ್ಕಳಿಗೆ ನೆಲದ ಪರಂಪರೆ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯದಲ್ಲಿ 2,500ರಿಂದ 3,000 ಅಘೋಷಿತ ಸ್ಮಾರಕಗಳಿದ್ದು ರಾಜ್ಯದಲ್ಲಿ 772 ರಾಜ್ಯ ಸಂರಕ್ಷಿತ ಸ್ಮಾರಕಗಳಿವೆ. ರಾಜಮನೆತನ ಆಳ್ವಿಕೆ ಅವಧಿಯಲ್ಲಿನ ಅನೇಕ ಸ್ಮಾರಕಗಳನ್ನು ರಕ್ಷಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ತಿಳಿಸಿದರು.

ಶಿಕ್ಷಣ ಸಂಯೋಜಕಿ ಗಂಗರತ್ನಮ್ಮ, ಮುಖ್ಯ ಶಿಕ್ಷಕರಾದ ನಂಜುಂಡ, ಕೆ.ಸಿ.ಮಂಜುನಾಥ್ ಇಸಿಒ ನಂಜುಂಡಪ್ಪ, ಟಿಪಿಒ ಮುರಳಿ, ಇಸಿಒ ಚಂದ್ರಶೇಖರ್, ಶಿಕ್ಷಕಿ ನಂದಾದೇವಿ , ಇಂದಿರಾಗಾಂದಿ ಶಾಲೆ ಪ್ರಾಂಶುಪಾಲ ಆಂಜನೇಯಲು, ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕಿನ ವಿವಿಧ ಪ್ರೌಢಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!