Gudibande : ಗುಡಿಬಂಡೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ ಗುಡಿಬಂಡೆ ತಾಲ್ಲೂಕು ಆರನೇ ಸಾಹಿತ್ಯ ಸಮ್ಮೇಳನವನ್ನು (Sahithya Sammelana) ಅದ್ಧೂರಿಯಾಗಿ ಪ್ರಾರಂಭಿಸಲಾಯಿತು. ಐಟಿಐ ಕಾಲೇಜು ಉಪನ್ಯಾಸಕ ಸ.ನ.ನಾಗೇಂದ್ರ ಸಮ್ಮೇಳನಾಧ್ಯಕ್ಷರಾಗಿದ್ದರು.
ಕಸ್ತೂರಿ ಜಗನ್ನಾಥ ಶಿಕ್ಷಣ ದ್ವಾರ, ಅವಧೂತ ಅಶ್ವತ್ಥ ಜ್ಙಾನದ್ವಾರ, ಕ್ಯಾಪ್ಟನ್ ಸುಬ್ಬರಾಯಪ್ಪ ರಕ್ಷಣಾದ್ವಾರ, ಅಜಿತ್ ಕುಮಾರ್ ಯೋಗದ್ವಾರ, ಎಚ್.ನರಸಿಂಹರೆಡ್ಡಿ, ಕೆ.ಅಶ್ವತ್ಥರೆಡ್ಡಿ ಸಹಕಾರಿ ದ್ವಾರಗಳನ್ನು ನಿರ್ಮಿಸಲಾಗಿತ್ತು. ರಾಷ್ಟ್ರ ಧ್ವಜವನ್ನು ತಹಶೀಲ್ದಾರ್ ಮನೀಷಾ, ನಾಡಧ್ವಜವನ್ನು ಡಿಡಿಪಿಐ ಬೈಲಾಂಜನೇಯ, ಕಸಾಪ ತಾಲ್ಲೂಕು ಅಧ್ಯಕ್ಷ ಸುಬ್ಬರಾಯಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಸಮ್ಮೇಳನಾಧ್ಯಕ್ಷರು ಹಾಗೂ ತಾಯಿ ಭುವನೇಶ್ವರಿದೇವಿ ಭಾವವಚಿತ್ರದ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ನಡೆಯಿತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಟ್ಟಣ ಪಂಚಾಯಿತಿ ಅಧ್ಯಕ್ಷೆ ನಗೀನ್ ತಾಜ್, ಉಪಾಧ್ಯಕ್ಷ ವಿಕಾಸ, ಮುಖ್ಯಾಧಿಕಾರಿ ಸಭಾಶೀರಿನ್, ಸಿಪಿಐ ನಯಾಜ್ ಬೇಗ್, ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ, ಬಿಇಒ ಮುನೇಗೌಡ, ನಿಕಟ ಪೂರ್ವ ಅಧ್ಯಕ್ಷ ರಾಜಶೇಖರನಾಯ್ಡು, ವೆಂಕಟಾಚಲಯ್ಯ, ರಫೀಕ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.