Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ (Sommenahalli) ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆದಿನಾರಾಯಣರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚೌಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ (Dairy Election) ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಾಗರಾಜ್ ಘೋಷಿಸಿದ್ದಾರೆ.
ನಿರ್ದೇಶಕರಾದ ಎಸ್.ವಿ. ಆದಿನಾರಾಯಣಪ್ಪ, ತಿಮ್ಮಪ್ಪ, ಬಾಲಕೃಷ್ಣ, ನಾರಾಯಣಸ್ವಾಮಿ, ರವಿ, ವೇಣು, ನರಸಮ್ಮ, ಆದಿನಾರಾಯಣಪ್ಪ, ಕೃಷ್ಣಪ್ಪ, ನಂಜಮ್ಮ, ಲಕ್ಷ್ಮೀದೇವಮ್ಮ ಹಾಗೂ ಮುಖಂಡರಾದ ಅಶ್ವತ್ಥಪ್ಪ, ಜಿ.ಲಕ್ಷ್ಮೀನಾರಾಯಣ, ಶಂಕರ್, ಗಂಗರಾಜು, ರಾಮಕೃಷ್ಣ, ನರಸಿಂಹಮೂರ್ತಿ, ಶ್ರೀನಿವಾಸ, ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.