Gudibande : ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಆಶ್ರಯದಲ್ಲಿ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ (Somenahalli) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ (Jana Spandana Program) ಬುಧವಾರ ನಡೆಸಲಾಯಿತು.
ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಸೋಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತರಿಗಾಗಿ ಒಟ್ಟು 188 ವಸತಿ ಮಂಜೂರು ಮಾಡಲಾಗಿದೆ. ನಿವೇಶನ ರಹಿತರಿಗಾಗಿ 15 ಎಕರೆ ಕಾಯ್ದಿರಿಸಲಾಗಿದೆ. ಈ ಹಿಂದೆಯೂ ಸೋಮೇನಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾಗ ಅನೇಕರು ಅಹವಾಲು ಸಲ್ಲಿಸಿದ್ದರು. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದು ತಿಳಿಸಿದರು.
ತಹಶೀಲ್ದಾರ್ ಸಿಗ್ಬತ್‌ವುಲ್ಲಾ, ಗ್ರಾ.ಪಂ ಅಧ್ಯಕ್ಷೆ ಸುಮಂಗಳಮ್ಮ, ಗ್ರಾ.ಪಂ ಉಪಾಧ್ಯಕ್ಷ ಸೋಮಣ್ಣ, ನಯಜ್ ಬೇಗ್, ಜಗದೀಶ್ ರೆಡ್ಡಿ, ಕೇಶವರೆಡ್ಡಿ, ಡಾ.ರವೀಂದ್ರ, ರಫೀಕ್, ದಿವಾಕರ್, ಕೆ.ವಿ.ನಾರಾಯಣಸ್ವಾಮಿ, ಬಿ. ಮಂಜುನಾಥ್, ರಾಮಾಂಜಿನಪ್ಪ, ಆದಿನಾರಾಯಣರೆಡ್ಡಿ, ಆದಿರೆಡ್ಡಿ, ರಿಯಾಜ್ ಪಾಷಾ, ಎಚ್.ಪಿ.ಲಕ್ಷ್ಮಿನಾರಾಯಣ, ಇಂದಿರಾ ಅಶ್ವಥ್ ರೆಡ್ಡಿ ಉಪಸ್ಥಿತರಿದ್ದರು.