Gudibande : ಗುಡಿಬಂಡೆ ತಾಲ್ಲೂಕಿನ ಉಲ್ಲೋಡು (Ullodu) ಗ್ರಾಮದಲ್ಲಿ ಕಂದಾಯ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಿಂದ ಜನಸ್ಪಂದನ (Janaspandana Program) ಹಾಗೂ ಸರ್ಕಾರದಿಂದ ವಿವಿಧ ಇಲಾಖೆಗಳ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು. 175 ಅರ್ಜಿ ಬಂದಿದ್ದು, ಹೆಚ್ಚಾಗಿ ನಿವೇಶನ ಸಮಸ್ಯೆ ಹಾಗೂ ಬೆಸ್ಕಾಂ ಸಮಸ್ಯೆ ವರದಿಯಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, “ನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳ ಗಮನಕ್ಕೆ ನಿಮ್ಮ ಸಮಸ್ಯೆ ತರುವದು ನಿಮ್ಮ ಹಕ್ಕು,” ಎಂದರು.
ಈ ವೇಳೆ ಬೀಚಗಾನಹಳ್ಳಿ ಪಶು ಆಸ್ಪತ್ರೆ ಕಟ್ಟಡ, ಪದವಿ ಪೂರ್ವ ಕಾಲೇಜು ಕೊಠಡಿ ಉದ್ಘಾಟನೆ, ರಾಮಪಟ್ಟಣ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ, ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಗಳೂ ನಡೆದವು. ತಹಶೀಲ್ದಾರ್ ಸಿಬ್ಬತುಲ್ಲಾ, ಇಒ ನಾಗಮಣಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.