Monday, September 26, 2022
HomeSidlaghattaಶಿಡ್ಲಘಟ್ಟದ ಡಾ.ಎಚ್.ಜಿ.ಗೋವಿಂದ ಗೌಡ ಅವರಿಗೆ ರಾಜ್ಯ ಪ್ರಶಸ್ತಿ

ಶಿಡ್ಲಘಟ್ಟದ ಡಾ.ಎಚ್.ಜಿ.ಗೋವಿಂದ ಗೌಡ ಅವರಿಗೆ ರಾಜ್ಯ ಪ್ರಶಸ್ತಿ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಡಾ.ಎಚ್.ಜಿ.ಗೋವಿಂ ಗೌಡ (Dr. H G Govinda Gowda) ಅವರಿಗೆ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2020-21ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ NSS ಸಂಯೋಜನಾಧಿಕಾರಿ ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ (Governer Thawar Chand Gehlot) ರಾಜಭವನದಲ್ಲಿ ಪ್ರಧಾನ ಮಾಡಿದರು.

ರೈತ ಕುಟುಂಬದ ಹಿನ್ನೆಲೆಯ ಡಾ.ಎಚ್.ಜಿ.ಗೋವಿಂದ ಗೌಡ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿಯಾಗಿದ್ದಾರೆ. ಇವರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಗಳು, ಸಸಿ ನೆಡುವ ಕಾರ್ಯಕ್ರಮಗಳು, ಕೋವಿಡ್ ಸಂಧರ್ಭದಲ್ಲಿ ಸಲ್ಲಿಸಿದ ಅನುಪಮ ಸೇವೆ, ಆರೋಗ್ಯ ಮತ್ತು ಕ್ಯಾನ್ಸರ್ ಕುರಿತ ಜಾಗೃತಿ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು, ಭಾವೈಕ್ಯತಾ ಶಿಬಿರಗಳು, ಸೈಕಲ್ ಜಾಥಾ, ಪ್ಲಾಸ್ಟಿಕ್ ಮುಕ್ತ ಸಮಾಜ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಗ್ರಾಮಗಳ ಅಭಿವೃದ್ಧಿ ಹಾಗೂ ಅನೇಕ ವಿಭಿನ್ನ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

error: Content is protected !!