Sidlaghatta : ಅಕ್ರಮವಾಗಿ (Illegal) ಪಡಿತರ (Ration) ಅಕ್ಕಿಯನ್ನು (Rice) ಮಿಲ್‍ವೊಂದಕ್ಕೆ ಸಾಗಾಣಿಕೆ ಮಾಡುತ್ತಿದ್ದಾಗ ಧಾಳಿ ಮಾಡಿದ ಪೊಲೀಸರು (Police) ಅಕ್ಕಿ, ಟೆಂಪೋ ಹಾಗೂ ಅಕ್ಕಿ ಸಾಗಿಸುತ್ತಿದ್ದ ಆರೋಪಿಗಳನ್ನು ಬಂದಿಸಿ Case ದಾಖಲಿಸಿದ್ದಾರೆ.
ಶಿಡ್ಲಘಟ್ಟದಿಂದ ಕೋಲಾರದ ಮಿಲ್‍ವೊಂದಕ್ಕೆ ಅಕ್ಕಿ ಸಾಗಿಸುತ್ತಿದ್ದ ನಗರದ ರಹಮತ್‍ನಗರದ ಅಲ್ಲಾಬಕಾಶ್, ನಿಸಾರ್ ಪಾಳ್ಯದ ಅರ್ಫಾಜ್‍ರನ್ನು ಬಂದಿಸಿ ತಲಾ 50 ಕೆಜಿ ತೂಕದ 50 ಮೂಟೆಗಳನ್ನು, ಒಟ್ಟಾರೆ 2500 ಕೆಜಿ ಪಡಿತರ ಅಕ್ಕಿಯನ್ನು ಲಾರಿ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶಿಡ್ಲಘಟ್ಟ ನಗರ ಠಾಣೆಯ ಅಪರಾಧ ವಿಭಾಗದ ಎಸ್‍ಐ ಪದ್ಮಾವತಮ್ಮ ಹಾಗೂ ಸಿಬ್ಬಂದಿಯು ನಗರದ ಮಯೂರ ವೃತ್ತದಲ್ಲಿ ಅಶೋಕ್ ಲೈಲ್ಯಾಂಡ್ ಮಿನಿ ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಅಕ್ರಮ ಪಡಿತರ ಮೂಟೆಗಳು ಪತ್ತೆಯಾಗಿದೆ.
ಶಿಡ್ಲಘಟ್ಟದಿಂದ ಕೋಲಾರದ ಇಸ್ಮಾಯಿಲ್ ಎನ್ನುವವರ ಮೂಲಕ ಕೋಲಾರದ ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಹಿಂಭಾಗದಲ್ಲಿನ ಮಿಲ್‍ವೊಂದಕ್ಕೆ ಅಕ್ಕಿಯನ್ನು ಸಾಗಿಸುತ್ತಿರುವುದಾಗಿ ಬಂಧಿತ ಆರೋಪಿಗಳು ವಿಚಾರಣೆವೇಳೆ ಬಾಯಿಬಿಟ್ಟಿದ್ದಾರೆ.
2021 Chikkaballapur.com