Sunday, June 11, 2023
HomeChikkaballapurಜಿಲ್ಲೆಯಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಜಿಲ್ಲೆಯಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

- Advertisement -
- Advertisement -
- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ರಾಜ್ಯ ಮಹಿಳಾ ಆಯೋಗ, ಸಂಜೀವಿನಿ-ಡೇ- NRLM ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ಡೇ-ನಲ್ಮ್- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ ಆಶ್ರಯದಲ್ಲಿ 2021-22ನೇ ಸಾಲಿನ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ( International Women’s Day ) ಅಂಗವಾಗಿ ಮಹಿಳಾ ಸಮಾವೇಶ, ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಮತ್ತು ಮಹಿಳಾ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Dr K Sudhakar ) “ತಪ್ಪು ತಿಳುವಳಿಕೆಯಿಂದ ಕೆಲವು ಪುರುಷರು ಮಹಿಳೆಯರನ್ನು ಉದ್ಯೋಗಕ್ಕೆ ಕಳುಹಿಸಲು ಹಿಂಜರಿಯುತ್ತಾರೆ. ಈ ತಪ್ಪು ಕಲ್ಪನೆ ದೂರವಾಗಿ ಎಲ್ಲ ರಂಗಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತಾದರೆ ಮಾತ್ರ ಸುಸ್ಥಿರ ಹಾಗೂ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಇಂದು ಕುಟುಂಬದ ಪೋಷಣೆ, ಹೂಡಿಕೆ, ಉಳಿತಾಯ, ವ್ಯಾಪಾರ ವ್ಯವಹಾರಗಳನ್ನು ಜವಾಬ್ದಾರಿಯಿಂದ ನಿಭಾಯಿಸುವಲ್ಲಿ ಮಹಿಳೆಯರೇ ಸಮರ್ಥರಾಗಿದ್ದಾರೆ. ಗಂಡು ಹೆಣ್ಣು ತಾರತಮ್ಯ ಸಂಪೂರ್ಣವಾಗಿ ಹೋಗಲಾಡಿಸಿಮಹಿಳೆಯರು ನಿರ್ಭೀತಿಯಿಂದ ಓಡಾಡುವ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಬೇಕು. ಹೆಣ್ಣು ಮಕ್ಕಳ ಮಾನಸಿಕ ಚೈತನ್ಯ, ಶಕ್ತಿ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು” ಎಂದು ಹೇಳಿದರು.

ವಕೀಲರಾದ ಪದ್ಮ ಕೆ.ವಿ.ಮತ್ತು ಆರ್.ಶಾಲಿನಿ , ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭಾ ಅಧ್ಯಕ್ಷ ಆನಂದರೆಡ್ಡಿ ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗೌರಿಬಿದನೂರು

International Womens Day Gauribidanur

Gauribidanur : KHP ಫೌಂಡೇಷನ್ ‌ವತಿಯಿಂದ ಗೌರಿಬಿದನೂರು ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಾಸ್ಯಗಾರ್ತಿ ಸುಧಾ ಬರಗೂರು ( Sudha Baragur ) ಹಾಗೂ ತಂಡದವರಿಂದ ಹಾಸ್ಯ ರಸಮಂಜರಿ ನಡೆಯಿತು. ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸನ್ಮಾನಿಸಲಾಯಿತು.

ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ, ಪೌಂಡೇಷನ್ ‌ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ, ನಗರಸಭೆ ಅಧ್ಯಕ್ಷ ಎಸ್.ರೂಪ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಪ್ರಭಾನಾರಾಯಣಗೌಡ, ಉಪನ್ಯಾಸಕಿ ಡಾ.ಎ.ಬಿ.ಶೈಲಜಾ ಸಪ್ತಗಿರಿ, ಕೆ.ಕಾವ್ಯ, ಸುಷ್ಮಾಶ್ರೀನಿವಾಸ್, ಗೀತಾ, ಜಮುನಾ, ಮಂಜುಳಾ, ಲಕ್ಷ್ಮಿ, ಪದ್ಮಾವತಮ್ಮ, ಅಶ್ವತ್ಥಮ್ಮ, ವರಲಕ್ಷ್ಮಿ, ಮೋಮಿನ್ ತಾಜ್, ಸುಶೀಲಮ್ಮ, ಶಶಿಕಲಾ, ಸರ್ದಾರ್ ಅಕ್ತಾರ್, ಮಹೇಶ್, ಶೋಭಾ, ರಾಧಮ್ಮ, ಚನ್ನಮ್ಮ, ಭಾಗ್ಯಮ್ಮ, ಡಿಸೋಜ, ನಾಗಮಣಿ, ಭಾರತಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಾಗೇಪಲ್ಲಿ

International Womens Day Bagepalli

Bagepalli : ಬಾಗೇಪಲ್ಲಿ ಪಟ್ಟಣದ ದೇವರಾಜು ಅರಸು ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಮಂಗಳವಾರ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಎಸ್.ಎಂ.ಅರುಟಗಿ, ಗೌರಿಬಿದನೂರಿನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಭಾನಾರಾಯಣ ಗೌಡ , ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್, ತಾಲ್ಲೂಕು ಯೋಜನಾಧಿಕಾರಿ ಜಿ.ಪಿ.ಗಿರೀಶ್, ವಕೀಲ ಎ.ಜಿ.ಸುಧಾಕರ್, ಸಿ.ಎಸ್.ಚಿನ್ನಸ್ವಾಮಿ, ಮುಸ್ತಾಕ್ ಅಹಮದ್, ಜಿ.ಕೆ.ಅರುಣ, ವಿ.ವೆಂಕಟೇಶ್, ನಾರಾಯಣ, ನಂಜುಂಡಪ್ಪ, ಶ್ರೀನಿವಾಸ್, ಮಮತ, ಬಿಂದುಕುಮಾರಿ, ಸಾರಮ್ಮ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!