Tuesday, January 31, 2023
HomeChintamaniಪಂಚರತ್ನ ಯೋಜನೆಯ ಪೂರ್ವಭಾವಿ ಸಭೆ

ಪಂಚರತ್ನ ಯೋಜನೆಯ ಪೂರ್ವಭಾವಿ ಸಭೆ

- Advertisement -
- Advertisement -
- Advertisement -
- Advertisement -

Chintamani : ಚಿಂತಾಮಣಿ ನಗರದ ಹೊರವಲಯದ JDS ಕಾರ್ಯಾಲಯದಲ್ಲಿ ಗುರುವಾರ ಪಂಚರತ್ನ ಯೋಜನೆ (Pancharatna Yojane) ಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಕೃಷ್ಣಾರೆಡ್ಡಿ “ಜನತೆಯ ಒಳಿತಿಗಾಗಿ ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ವಸತಿ ಆಸರೆ, ರೈತ ಚೈತನ್ಯ, ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಎಂಬ 5 ಅಂಶಗಳನ್ನು ಸೇರಿಸಿ ಜೆಡಿಎಸ್ ಪಕ್ಷ ಪಂಚರತ್ನ ಯೋಜನೆ ರೂಪಿಸಿದ್ದು ರಾಜ್ಯದ ಅತ್ಯಂತ ಕಡುಬಡವರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೂ ಸಹ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವುದು ಕುಮಾರಸ್ವಾಮಿಯ ಉದ್ದೇಶವಾಗಿದೆ. ಕುಮಾರಸ್ವಾಮಿ (H D Kumarswamy) ಮತ್ತು ಸಿ.ಎಂ.ಇಬ್ರಾಹಿಂ ಯಾತ್ರೆಯಲ್ಲಿ ಇರಲಿದ್ದು ಕುರುಡಮಲೆ ಗಣೇಶ ದೇವಸ್ಥಾನದಲ್ಲಿ ನವೆಂಬರ್ 1ರಂದು ಪೂಜೆ ಸಲ್ಲಿಸಿದ ನಂತರ ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯೋಜನೆಯ ರಥಯಾತ್ರೆ ಆರಂಭವಾಗುತ್ತದೆ ಮತ್ತು ನವೆಂಬರ್ 6 ರಂದು ಬೆಳಿಗ್ಗೆ ಕೈವಾರ ತಾತಯ್ಯನವರ ದರ್ಶನ ಪಡೆದು ತಾಲ್ಲೂಕಿನಲ್ಲಿ ಯಾತ್ರೆ ಆರಂಭವಾಗಲಿದೆ” ಎಂದು ತಿಳಿಸಿದರು.

ತಾಲ್ಲೂಕಿನ ಜೆಡಿಎಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!