Chikkaballapur : ಚಿಕ್ಕಬಳ್ಳಾಪುರ ನಗರದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ದಿ. ಕೆ.ಬಿ.ಪಿಳ್ಳಪ್ಪ (K B Pillappa Statue Inauguration) ಅವರ ಪುತ್ಥಳಿ ಅನಾವರಣವನ್ನು ಗುರುವಾರ ನೆರೆವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ” ಈ ವಿಚಾರದಲ್ಲಿ ರಾಜಕಾರಣ ಬೆರೆಸಲು ಹೋಗುವುದಿಲ್ಲ. ಪುತ್ಥಳಿ ಅನಾವರಣದಲ್ಲಿ ಯಾವ ರಾಜಕಾರಣ ನನಗೆ ಕಾಣುತ್ತಿಲ್ಲ. ಹಳೇ ಪಿಎಲ್‌ಡಿ ಬ್ಯಾಂಕ್ ಮುಂದೆ ಅಮೃತ ಶಿಲೆಯಲ್ಲಿ ಪುತ್ಥಳಿ ನಿರ್ಮಿಸಿ ಅಂದಿನ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ್ ಉದ್ಘಾಟಿಸಿದ್ದರು. ನೂತನ ಕಟ್ಟಡವಾದ ನಂತರ ಕಂಚಿನಪುತ್ಥಳಿ ನಿರ್ಮಿಸಲಾಗಿದೆ. ಇದಕ್ಕಾಗಿ ಆಡಳಿತ ಮಂಡಳಿ ಹಾಗೂ ಸಹಕಾರ ಕೊಟ್ಟ ಎಲ್ಲರನ್ನೂ ಅಭಿನಂದಿಸುತ್ತೇನೆ” ಎಂದು ತಿಳಿಸಿದರು.
ಪಿಳ್ಳಪ್ಪ ಅವರ ಪುತ್ರರಾದ ಡಾ.ಶ್ರೀನಿವಾಸಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರು, ಸ್ವರೂಪ್ , ಬ್ಯಾಂಕ್ ಅಧ್ಯಕ್ಷ ಕಾಳೇಗೌಡ, ಮುಖಂಡರಾದ ಯಲುವಹಳ್ಳಿ ರಮೇಶ್, ಬಾಲಕುಂಟಹಳ್ಳಿ ಮುನಿಯಪ್ಪ, ಆವುಲರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಮುನೇಗೌಡ ಉಪಸ್ಥಿತರಿದ್ದರು.