Kaiwara, Chintamani : ಕೈವಾರದ ಯೋಗಿನಾರೇಯಣ ಮಠದಲ್ಲಿ (Sri Kaiwara Yogi Nareyana Mutt) ಹಮ್ಮಿಕೊಂಡಿರುವ ಮೂರು ದಿನಗಳ ಗುರುಪೂಜಾ ಸಂಗೀತೋತ್ಸವ (Guru Pooja Sangeetotsava) ಕಾರ್ಯಕ್ರಮಕ್ಕೆ ಸೋಮವಾರ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ (Dr. M R Jayaram) ಅವರು ಚಾಲನೆ ನೀಡಿದರು.
‘ಭಕ್ತಿ, ಜ್ಞಾನ ಹಾಗೂ ವೈರಾಗ್ಯ ಕೆಲವರಿಗೆ ಮಾತ್ರ ಸೀಮಿತವಾಗಬಾರದು. ಸಾಮಾನ್ಯ ಜನರಿಗೂ ಅದು ಸಿಗುವಂತಾಗಬೇಕು ಎಂಬುದು ಗುರು ಪರಂಪರೆಯ ವಾಣಿಯಾಗಿದೆ. ಬುದ್ಧ, ಶಂಕರ, ರಾಮಾನುಜರ ಕಾಲದಲ್ಲಿ ಕೇವಲ ಸಾಧಕರಿಗೆ ಮಾತ್ರ ಜ್ಞಾನ, ವೈರಾಗ್ಯ ಸೀಮಿತವಾಗಿತ್ತು. ಯೋಗಿನಾರೇಯಣ ಯತೀಂದ್ರರು ಸಂಸಾರದಲ್ಲಿರುವ ಜನಸಾಮಾನ್ಯರಿಗೂ ಜ್ಞಾನ, ವೈರಾಗ್ಯವನ್ನು ಸರಳವಾಗಿ ಬೋಧನೆ ಮಾಡಿದ್ದಾರೆ.’ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮಠ, ಸಭಾಂಗಣ ಹಾಗೂ ಆವರಣವನ್ನು ವಿದ್ಯುತ್ ದೀಪಾಲಂಕಾರದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.
ಬೆಳಿಗ್ಗೆ ಸುಪ್ರಭಾತ, ಗೋಪೂಜೆ ಹಾಗೂ ಸದ್ಗುರುಗಳ ಪೂಜೆಯೊಂದಿಗೆ ಸಂಗೀತೋತ್ಸವ ಆರಂಭವಾಯಿತು. ತಾತಯ್ಯನವರ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮಠದಿಂದ ಸಭಾಂಗಣಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ನಂತರ ತಾತಯ್ಯನವರ ಕೀರ್ತನೆಗಳನ್ನು ಹಾಡುವುದರ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಭಾಂಗಣ ದಲ್ಲಿ ಅಮರನಾರೇಯಣ ಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರಸ್ವಾಮಿ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆದವು. ಇಡೀ ರಾತ್ರಿ ಸಂಗೀತೋತ್ಸವ ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur