- Advertisement -
- Advertisement -
- Advertisement -
- Advertisement -
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿಗೆ (Kalanayakanahalli) ಗುರುವಾರ ಸಚಿವ ಆರ್.ಅಶೋಕ್ ಅವರ ಪತ್ನಿ ಪ್ರಮೀಳಾರಾಣಿ ಮತ್ತು ಕುಟುಂಬದವರು ಗ್ರಾಮದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಶ್ರೀ ಬಸವೇಶ್ವರಸ್ವಾಮಿ ದೇವಾಲಯಕ್ಕೆ (Sri Basaveshwaraswamy Temple) ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿನ ತಮ್ಮ ದೂರದ ಸಂಬಂಧಿಗಳು ಹಾಗೂ ಪರಿಚಿತರನ್ನು ನೆನಪು ಮಾಡಿಕೊಂಡು ಅವರೆಲ್ಲರನ್ನೂ ಮಾತನಾಡಿಸಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಮೀಳಾರಾಣಿ ಅವರನ್ನು ಗ್ರಾಮಸ್ಥರು ಅವರನ್ನು ಗೌರವಿಸಿದರು.
ಕಾಳನಾಯಕನಹಳ್ಳಿಯ ಉಮಾಭೀಮೇಶ್ ದಂಪತಿ, ಶ್ರೀನಿವಾಸ್, ಜಮುನಾರಾಣಿ ದಂಪತಿ, ಮಂಜೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -