Chikkaballapur : ಭಾನುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರು ಗ್ರಾಮದಲ್ಲಿ ಕನ್ನಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಕನ್ನಡ ಧ್ವಜಾರೋಹಣ ಹಾಗೂ ಸಸಿ ನೆಡುವ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೆಲ-ಜಲ ಭಾಷೆಯ ಜತೆಗೆ ಕನ್ನಡ ನಾಡನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿದೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಂಘಟನೆಯನ್ನು ಬಲಪಡಿಸುವ ಮೂಲಕ ಸಂಘತನೆಗೆ ಹೆಚ್ಚಿನ ಶಕ್ತಿ ತುಂಬಬೇಕಾಗಿದೆ ಎಂದು ಮುಖಂಡ ಯಳುವಹಳ್ಳಿ ರಮೇಶ್ ಹೇಳಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಚಲಪತಿ ಗೌಡ ಮಾತನಾಡಿ, ಕಳೆದ 30 ವರ್ಷಗಳಿಂದ ಕನ್ನಡದ ನೆಲ-ಜಲ ಹಾಗೂ ಸಾಮಾನ್ಯ ಜನರಿಗೆ ಅನ್ಯಾಯವಾದಾಗ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಯಾವುದಕ್ಕೂ ಎದೆಗುಂದದೆ ನಾನು ನ್ಯಾಯದ ಪರವಾಗಿ ಹೋರಾಟಗಳನ್ನು ಮಾಡಿಕೊಂಡು ಸಂಘಟನೆಯನ್ನು ಬಲಪಡಿಸುತ್ತಿದ್ದೇನೆ ಎಂದರು.
ಸಂಘಟನೆಯ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸುವುದು ಇತ್ತೀಚಿನ ದಿನಗಳಲ್ಲಿ ಕಷ್ಟದ ಕಾರ್ಯವಾಗಿದೆ ಆದರೆ ಚಲಪತಿ ಗೌಡ ನಾಡಿನಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಧಕ್ಕೆಯಾದಾಗ ಕೂಡಲೇ ಹೋರಾಟಕ್ಕೆ ಮುಂದಾಗಿ ಸರ್ಕಾರದ ಗಮನಕೆ ತಂದು ನ್ಯಾಯ ಒದಗಿಸುತ್ತಾರೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಎಂ.ಮುನೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯ ಡಾ.ಮಧುವನ್, ಉಪನ್ಯಾಸಕ ಎನ್.ಚಂದ್ರಶೇಖರ್, ಸಮಾಜಸೇವಕ ಹೋಟೆಲ್ ರಾಮಣ್ಣ, ಪೌರಕರ್ಮಿಕರಾದ ವೆಂಕಟಮ್ಮ ಅವರಿಗೆ ‘ಕೋವಿಡ್ 19 ಸೇವಾ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಡಿವೈಎಸ್ಪಿ ಮಂಜುನಾಥ್, ಚಿಂತಕ ಪ್ರೊ.ಕೋಡಿರಂಗಪ್ಪ, ವಕೀಲ ಆರ್.ಮಟಮಪ್ಪ, ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ರೂಪವಾಣಿ, ಪುಟ್ಟೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಚಂದ್ರ, ಉಪಾಧ್ಯಕ್ಷ ವನಜ, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷ ಅಂತೋನಿಸ್ವಾಮಿ, ಮುಖಂಡ ಅರಳಪ್ಪ, ದೇವರಾಜ್, ಮಂಜುನಾಥಗೌಡ, ಟಿ.ಕೆ.ಶಶಿಕುಮಾರ್, ಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Facebook: https://www.facebook.com/hicbpur
Twitter: https://twitter.com/hicbpur
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com