Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿವ್ಯ ಭಾರತ್ ಕರಾಟೆ ಡೋ (Divya Bharat Karate Do) ಅಸೋಸಿಯೇಷನ್ ವಿದ್ಯಾರ್ಥಿಗಳು ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಷಿಪ್ (Karate Championship) 2022 ರಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.
ಹನ್ನೊಂದು ವರ್ಷ ವಯಸ್ಸಿನ ವೈಟ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಎಲ್.ಮೋಹಿತ್ ಪ್ರಥಮ, ಹನ್ನೊಂದು ವರ್ಷ ವಯಸ್ಸಿನ ಎಲ್ಲೋ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಶ್ರೀಚರಣ್ ಪ್ರಥಮ, ಹತ್ತು ವರ್ಷ ವಯಸ್ಸಿನ ಆರೆಂಜ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಲವನಿತ್ ತೃತೀಯ, ಒಂಬತ್ತು ವರ್ಷ ವಯಸ್ಸಿನ ಆರೆಂಜ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ನಂದನ್ ತೃತೀಯ, 17 ವರ್ಷ ವಯಸ್ಸಿನ ಬ್ರೌನ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ರಾಜೇಶ್ ತೃತೀಯ ಸ್ಥಾನ ಪಡೆದಿರುವರು ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.