Tuesday, March 28, 2023
HomeGauribidanurಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದಲ್ಲಿ ಲಕ್ಷ ದೀಪೋತ್ಸವ

- Advertisement -
- Advertisement -
- Advertisement -
- Advertisement -

Gauribidanur : ಕಾರ್ತಿಕ ಮಾಸದ ಕೊನೆ ಶನಿವಾರದಂದು ಗೌರಿಬಿದನೂರು ತಾಲ್ಲೂಕಿನ ಅಲಕಾಪುರದಲ್ಲಿನ ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದಲ್ಲಿ ಸ್ಥಳೀಯರು‌ ಹಾಗೂ ಭಕ್ತಾಧಿಗಳ ಸಹಕಾರದಿಂದ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಶನಿವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನ ಜತೆಗೆ ಪೂಜಾ ಕೈಂಕಾರ್ಯಗಳಲ್ಲಿ ಸಡಗಡದಿಂದ ಪಾಲ್ಗೊಂಡಿದ್ದ ಭಕ್ತರು ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಶ್ರದ್ಧಾಭಕ್ತಿಯಿಂದ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ತಹಶೀಲ್ದಾರ್ ಎಚ್.ಶ್ರೀನಿವಾಸ್ ಮಾತನಾಡಿ , ” ಈಚೆಗಷ್ಟೇ ಧಾರ್ಮಿಕ ದತ್ತಿ ಮತ್ತು‌ ಮುಜರಾಯಿ ಇಲಾಖೆ ಹಾಗೂ ದಾನಿಗಳ ಸಹಕಾರದಿಂದಾಗಿ ಚನ್ನಸೋಮೇಶ್ವರ ಸ್ವಾಮಿ‌‌ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸುವ ಮೂಲಕ ಶಿಥಿಲಾವಸ್ಥೆ ಯಲ್ಲಿದ್ದ‌ ದೇವಾಲಯಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ಸ್ಥಳೀಯರ ಸಹಕಾರದೊಂದಿಗೆ ಲಕ್ಷ ದೀಪೋತ್ಸವ ‌ಕಾರ್ಯ ನಡೆಯುತ್ತಿರುವುದು ಸಂತಸ ವಿಚಾರವಾಗಿದೆ. ಪುರಾತನ ‌ಹಾಗೂ ಧಾರ್ಮಿಕ‌ ನೆಲೆಯೊಂದಿಗೆ ಈ ದೇವಾಲಯದಲ್ಲಿ ದಶಕಗಳಿಂದಲೂ ಸ್ಥಳೀಯರ ‌ಸಹಕಾರದೊಂದಿಗೆ ಭಕ್ತಿಪೂರ್ವಕವಾಗಿ ದೇವತಾ ಕಾರ್ಯ ನಡೆಯುತ್ತಿರುವುದು ವಿಶೇಷವಾಗಿದೆ ” ಎಂದು‌ ಹೇಳಿದರು.

ಕಂದಾಯ ಅಧಿಕಾರಿಗಳಾದ ಜಯಪ್ರಕಾಶ್, ರವಿ, ಶಿವಪ್ರಸಾದ್, ಮುಖಂಡರಾದ ಆರ್.ಪಿ.ಗೋಪಾಲಗೌಡ, ಪ್ರಭಾಕರ್, ಬಿ.ಜಿ.ವೇಣುಗೋಪಾಲರೆಡ್ಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!