Chikkaballapur : ಫೆಬ್ರವರಿ 27 ಮತ್ತು 28 ರಂದು ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರದಲ್ಲಿ ನಡೆಯಲ್ಲಿರುವ ಜಿಲ್ಲಾ ಒಂಬತ್ತನೇ ಸಾಹಿತ್ಯ ಸಮ್ಮೇಳನದ (KaSaPa District Literature Festival) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಎಸ್.ಷಡಕ್ಷರಿ (S Shadakshari) ಅವರನ್ನು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದರು. .
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ “ಷಡಕ್ಷರಿ ಅವರು ಈ ಹಿಂದಿ ನಡೆದ ಸಮ್ಮೇಳನದ ಅಧ್ಯಕ್ಷರಾಗಿ ಆಗಬೇಕಾಗಿತ್ತು. ಆದರೆ ಅದು ಸಾಧ್ಯವಾಗದೆ. ಈಗ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ನಮ್ಮ ಆಹ್ವಾನ ಅವರಿಗೆ ಸಂತೋಷ ತಂದಿದೆ” ಎಂದು ತಿಳಿಸಿದರು.
ಸಾಹಿತಿ ಹಂಪ ನಾಗರಾಜಯ್ಯ ಅವರು ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ಲಕ್ಷ್ಮಣರಾವ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಅವರು ಸಹ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.
ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಯಲುವಳ್ಳಿ ಸೊಣ್ಣೇಗೌಡ, ಸುಬ್ಬರಾಯಪ್ಪ, ದೇವತಾ ದೇವರಾಜ್, ಅಧ್ಯಾಪಕರಾದ ರವಿಕುಮಾರ್, ಶಶಿಧರ್, ಕೆ.ಎಂ.ರೆಡ್ಡಪ್ಪ, ಪ್ರಭಾ ನಾರಾಯಣಗೌಡ, ಮಂಜುನಾಥ್, ಅಮೃತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.