Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishat) (KaSaPa) ಪದಾಧಿಕಾರಿಗಳು ಸರ್.ಎಂ. ವಿಶ್ವೇಶ್ವರಯ್ಯ (Sir Mokshagundam Visvesvaraya) (Sir MV) ಅವರ 162ನೇ ಜಯಂತಿಯ ಅಂಗವಾಗಿ ಮುದ್ದೇನಹಳ್ಳಿ (Muddenahalli) ಯಲ್ಲಿರುವ ವಿಶ್ವೇಶ್ವರಯ್ಯ ಅವರ ಸಮಾಧಿಗೆ ನಮನ ಸಲ್ಲಿಸಿದರು.
ಆಧುನಿಕ ಮೈಸೂರಿನ ಶಿಲ್ಪಿಯಾಗಿ ಮತ್ತು ಕೃಷ್ಣರಾಜಸಾಗರ ಅಣೆಕಟ್ಟು (KRS Dam) , ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ (Mysore Lamps Factory), ಬೆಂಗಳೂರಿನ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾನಿಲಯ (Bangalore University), ಮೈಸೂರು ಬ್ಯಾಂಕ್ (Mysore Bank) ಸ್ಥಾಪನೆ ಮುಂತಾದ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿ ವಿಶ್ವೇಶ್ವರಯ್ಯ ಅವರು ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಕೋಡಿರಂಗಪ್ಪ ಸ್ಮರಿಸಿದರು
ಈ ವೇಳೆ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಕಸಾಪ ಪದಾಧಿಕಾರಿಗಳಾದ ಕೆ.ಎಂ.ರೆಡ್ಡಪ್ಪ, ಚಲಪತಿಗೌಡ, ಶಂಕರ್, ಎನ್.ನಾರಾಯಣಸ್ವಾಮಿ, ಪಟೇಲ್ ನಾರಾಯಣಸ್ವಾಮಿ, ಉಮಾಶಂಕರ್, ಶ್ರೀರಾಮ್, ರವಿಕುಮಾರ್, ಸುಶೀಲ ಮಂಜುನಾಥ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.