Chikkaballapur : ಪರಿಸರ ದಿನದ ಅಂಗವಾಗಿ (World Environment Day) ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat – KaSaPa) ವತಿಯಿಂದ ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪರಿಸರ ಕುರಿತ ನಾಟಕವನ್ನು ಇನಮಿಂಚೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ವಿಶ್ವಸಂಸ್ಥೆ (United Nations) ಯ ಮಾನದಂಡಗಳ ಪ್ರಕಾರ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಪುಟ್ಟ ದೇಶವಾದ ಭೂತಾನ್ (Bhutan) ನಲ್ಲಿ ಶೇ 71ರಷ್ಟು ಅರಣ್ಯ ಇದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಪಾ.ಮು.ಚಲಪತಿಗೌಡ, ವಿ.ಮಂಜುನಾಥ್, ಪಿ.ಎನ್.ಶಾಂತಮ್ಮ, ಪ್ರೇಮಲೀಲಾ ವೆಂಕಟೇಶ್, ಲತಾ ರಾಮಮೋಹನ್, ಗೊಳ್ಳುಚಿನ್ನಪ್ಪನಹಳ್ಳಿ ವೆಂಕಟೇಶ್, ಶೋಭಾ ಶ್ರೀನಿವಾಸ್, ಸಿದ್ದೇಶ್ ಬಂಡಿಮನಿ, ಸರಸಮ್ಮ, ಮ.ಗ.ಹೆಗಡೆ, ಇಬ್ರತುನ್ನೀಸ, ಎಸ್.ಗಾಯತ್ರಿ, ಎ.ಆರ್.ಶಶಿಕಲಾ, ರಾಜಮ್ಮ, ಭೂಮಿಕಾ, ಪಟೇಲ್ ನಾರಾಯಣಸ್ವಾಮಿ ಮತ್ತೀತರರು ಪಾಲ್ಗೊಂಡಿದ್ದರು.
ತೀರ್ಪುಗಾರರಾಗಿ ಸುಶೀಲಾ ಮಂಜುನಾಥ್ ಮತ್ತು ಹಾಲಪ್ಪ ಕಾರ್ಯನಿರ್ವಹಿಸಿದರು. ವಿ.ಮಂಜುನಾಥ್ ರವರಿಗೆ ಪ್ರಥಮ ಬಹುಮಾನ, ಶಶಿಕಲಾ ರವರಿಗೆ ದ್ವಿತೀಯ ಬಹುಮಾನ , ಚಲಪತಿಗೌಡ ರವರಿಗೆ ತೃತೀಯ ಬಹುಮಾನ ದೊರೆಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ವೈ.ಎಲ್.ಹನುಮಂತ ರಾವ್, ಚನ್ನಮಲ್ಲಿಕಾರ್ಜುನ, ನಾಗಭೂಷಣರೆಡ್ಡಿ, ಮುನಿನಾರಾಯ ಣಪ್ಪ, ಡಿ.ಎಂ.ಶ್ರೀರಾಮ, ವಿ.ಎನ್.ಶಾಂತಮ್ಮ, ರವಿಕುಮಾರ್, ನಳಿನಾಕ್ಷಿ, ಜಯಭಾರತಿ ಉಪಸ್ಥಿತರಿದ್ದರು .