Friday, March 24, 2023
HomeBagepalliಬಾಗೇಪಲ್ಲಿಯಲ್ಲಿ ಕೇರಳ ಸಿಎಂ

ಬಾಗೇಪಲ್ಲಿಯಲ್ಲಿ ಕೇರಳ ಸಿಎಂ

- Advertisement -
- Advertisement -
- Advertisement -
- Advertisement -

Bagepalli : ಬಾಗೇಪಲ್ಲಿ ಪಟ್ಟಣದ KHB ಲೇಔಟ್‌ನಲ್ಲಿ ನಡೆದ CPM ರಾಜಕೀಯ ಸಮಾವೇಶದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ (Pinarayi Vijayan) ಪಾಲ್ಗೊಂಡಿದ್ದರು. ಬೆಳಿಗ್ಗೆ 11.30ರಿಂದ ಪಟ್ಟಣದ ಗೂಳೂರು ವೃತ್ತದಿಂದ ಸಿಪಿಎಂ ಕಾರ್ಯಕರ್ತರ ರ‍್ಯಾಲಿ ಆರಂಭವಾಯಿತು. ಮಧ್ಯಾಹ್ನ ಪಿಣರಾಯಿ ವಿಜಯನ್ (Chief Minister of Kerala) ಅವರು ಮುಖ್ಯದ್ವಾರದಿಂದ ವೇದಿಕೆಗೆ ಬರುವಾಗ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ CPM ಕಾರ್ಯಕರ್ತರು ಎದ್ದು ನಿಂತು ‘ಲಾಲ್ ಸಲಾಂ’, ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳನ್ನು ಕೂಗಿದರು.

“ಆತ್ಮೀಯ ಸಂಗಾತಿಗಳೇ, ಪ್ರಿಯ ಸಹೋದರ ಸಹೋದರಿಯರೇ” ಎಂದು ಕನ್ನಡದಲ್ಲಿ ಭಾಷಣವನ್ನು ಆರಂಭಿಸದ Comrade ಪಿಣರಾಯ್ ವಿಜಯನ್ “ಸಮಾನತೆ, ಜಾತ್ಯತೀತತೆ, ಪ್ರಗತಿಪರ ಚಳವಳಿಗಳಿಗೆ ಕರ್ನಾಟಕದಲ್ಲಿ ದೊಡ್ಡ ಪರಂಪರೆ ಇದ್ದು ಅಂತಹ ಪರಂಪರೆಯನ್ನು ಅಳಿಸಲು BJP ಮತ್ತು RSS ಪ್ರಯತ್ನಿಸುತ್ತಿವೆ. ಕೋಮುವಾದಿ, ಜಾತಿವಾದಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಸ್ಥಾನ ಇರಲಿಲ್ಲ. ಆದರೆ ಈಗ ಸ್ವಾತಂತ್ರ್ಯದ ಚರಿತ್ರೆಯನ್ನು ಬುಡಮೇಲು ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಲವ್ ಜಿಹಾದ್ ಸೇರಿದಂತೆ ಹಲವು ಸುಳ್ಳುಗಳು ಆರ್‌ಎಸ್‌ಎಸ್ ಕಾರ್ಖಾನೆಯಿಂದ ಉತ್ಪಾದನೆ ಮಾಡಿ ಮುಸ್ಲಿಮರ ವಿರುದ್ಧ ಪದೇ ಪದೇ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಕೋಲಾರದಲ್ಲಿ 1986ರಲ್ಲಿ ಸಿಪಿಎಂ ಶಾಸಕರು ಇದ್ದರು. ಬಾಗೇಪಲ್ಲಿಯಲ್ಲಿಯೂ ಪಕ್ಷದ ಜಿ.ವಿ.ಶ್ರೀರಾಮರೆಡ್ಡಿರವರು (G V Sreerama Reddy) ಶಾಸಕರಾಗಿ ಆಯ್ಕೆ ಆಗಿದ್ದರು. ಪ್ರಸ್ತುತ ಬಾಗೇಪಲ್ಲಿ ಕ್ಷೇತ್ರದ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಸಿಪಿಎಂ ಅಧಿಕಾರದಲ್ಲಿದ್ದು ಎರಡು ಪಂಚಾಯಿತಿಗಳಲ್ಲಿ ಜಾತ್ಯತೀತ ಪಕ್ಷಗಳ ಜತೆ ಅಧಿಕಾರವನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಪಕ್ಷವು ಮತ್ತಷ್ಟು ಬೆಳವಣಿಗೆ ಕಾಣಬೇಕು ” ಎಂದು ಹೇಳಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಮ್ಮ ಭಾಷಣದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಹೆಸರು ಪ್ರಸ್ತಾಪಿಸಿದಾಗ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಶ್ರೀರಾಮರೆಡ್ಡಿ ಅವರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿ ಅಗಲಿದ ನಾಯಕನನ್ನು ನೆನೆದರು.

ಸಿಪಿಎಂ ಪಾಲಿಟಿ ಬ್ಯೂರೊ ಸದಸ್ಯರಾದ ಬಿ.ವಿ.ರಾಘವುಲು, ಎಂ.ಎ.ಬೇಬಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿ.ಸಿ.ಬೈಯ್ಯಾರೆಡ್ಡಿ, ಕೆ.ನೀಳಾ, ಎಸ್.ವರಲಕ್ಷ್ಮಿ, ಯಾದವ ಶೆಟ್ಟಿ, ವಿ.ಜಿ.ಕೆ.ನಾಯರ್, ಜಿ.ಎನ್.ನಾಗರಾಜ್, ಕೆ.ಪ್ರಕಾಶ್, ಸೈಯದ್ ಮುಜೀಬ್, ಜಯರಾಮರೆಡ್ಡಿ, ಮಂಜುನಾಥರೆಡ್ಡಿ, ರಘುರಾಮರೆಡ್ಡಿ, ನಿತ್ಯಾನಂದ ಸ್ವಾಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!