Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಗೇಪಲ್ಲಿ (Bagepalli) ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ಅವರ ಅಧ್ಯಕ್ಷತೆಯಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಮತ್ತು ಹೊಸಹುಡ್ಯ ಗ್ರಾಮಗಳ ಬಳಿ ಕೈಗಾರಿಕೆಗಳ ಸ್ಥಾಪನೆಗೆ ವಶಕ್ಕೆ ಪಡೆಯುವ ಜಮೀನುಗಳಿಗೆ ದರ ನಿಗದಿ ಸಂಬಂಧ KIADB ಭೂಮಿ ದರ ನಿಗದಿ ಸಲಹಾ ಸಮಿತಿಯ ಸಭೆ (Land Rate Fix Meeting) ನಡೆಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಒಂದು ಎಕರೆ ಜಮೀನಿಗೆ ₹ 1 ಕೋಟಿ, ರಸ್ತೆಗೆ ಇರುವ ಜಮೀನುಗಳಿಗೆ ₹ 80 ಲಕ್ಷ ಮತ್ತು ತೀರಾ ಒಳಗಿರುವ ಒಂದು ಎಕರೆ ಜಮೀನಿಗೆ ₹ 70 ಲಕ್ಷ ದರ ನಿಗದಿಗೊಳಿಸಲಾಗಿದೆ.
ಸಭೆಯಲ್ಲಿ ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದರು.