Kolar : ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ (Lokasabha Election) ನಾಮಪತ್ರಗಳ ಪರಿಶೀಲನೆ (Nomination Scrutiny) ಶುಕ್ರವಾರ ನಡೆದಿದ್ದು, ಆರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ.
ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದ ವಿಶ್ವನಾಥ್ ಬಿ.ಇ, ಮಧುಸೂದನ್ ಕೆ.ಎಚ್., ಎ.ಟಿ.ಕೃಷ್ಣನ್, ಜಿ.ಲಲಿತಾ, ಆರ್‌ಪಿಐ ಪಕ್ಷದ ಎನ್.ಜೆ.ನರಸಿಂಹಮೂರ್ತಿ ಹಾಗೂ ಎನ್‌ಎಂಕೆ ಪಕ್ಷದ ಅಭ್ಯರ್ಥಿಯಾಗಿ ಎಲ್.ಬಾಬು ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.
ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಇರಲಿದೆ.