Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಳವನಹಳ್ಳಿಯ (Kolavanahalli) ಮಂಜುನಾಥ್ ಮತ್ತು ಮುನಿರತ್ನಮ್ಮ ದಂಪತಿ ಪುತ್ರ ಚೇತನ್ ಕುಮಾರ್ (Chethan Kumar)mಇತ್ತೀಚೆಗೆ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (University of Agricultural Sciences, Bangalore) 57ನೇ ಘಟಿಕೋತ್ಸವದಲ್ಲಿ (Convocation) BSc ಕೃಷಿ ಪದವಿಯಲ್ಲಿ 7 ಚಿನ್ನದ ಪದಕಗಳನ್ನು (Gold Medal) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ರಿಂದ ಪಡೆದಿದ್ದಾರೆ.
‘ಉನ್ನತ ಶಿಕ್ಷಣ ಪಡೆದು ಸಮಾಜದ ನಾಲ್ಕಾರು ಮಂದಿಗೆ ಉಪಯೋಗವಾಗುವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಗುರಿ ಇದೆ’ ಎಂದು ಚೇತನ್ ಕುಮಾರ್ ತಿಳಿಸಿದ್ದಾರೆ.
ಮುದ್ದೇನಹಳ್ಳಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಮಾಧ್ಯಮಿಕ, ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವ್ಯಾಸಂಗ ಮಾಡಿದ್ದ ಚೇತನ್ ಪದವಿಯಲ್ಲಿ ಕೃಷಿ ಮತ್ತು ವ್ಯವಹಾರ ನಿರ್ವಹಣೆ ವಿಭಾಗದಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.