Sidlaghatta : ಬಾಗೇಪಲ್ಲಿಯಿಂದ (Bagepalli) ದಿಬ್ಬೂರಹಳ್ಳಿ ಮಾರ್ಗವಾಗಿ ಚಿಂತಾಮಣಿಗೆ (Chintamani) ಹೋಗುತ್ತಿದ್ದ ಸರ್ಕಾರಿ ಬಸ್ (KSRTC Bus) ಗುರುವಾರ ಕೊಂಡಪ್ಪಗಾರಹಳ್ಳಿ ಗ್ರಾಮದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಉರುಳಿಬಿದ್ದಿದ್ದು (Accident) ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಅಧಿಕ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಬಿದ್ದ ಕೂಡಲೇ ಹೊರಬರಲು ಆಗದೇ ಪರದಾಡುತ್ತಿದ್ದ ಪ್ರಯಾಣಿಕರನ್ನು ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಬಸ್ಸಿನ ಕಿಟಕಿ ಗಾಜು ಒಡೆದು ರಕ್ಷಿಸಿ ಕೂಡಲೇ ದಿಬ್ಬೂರಹಳ್ಳಿ ಆಸ್ಪತ್ರೆಗೆ ದಾಖಲಿಸಿದರು.
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.