Chintamani : ಚಿಂತಾಮಣಿ ತಾಲ್ಲೂಕಿನ ಕುರುಬೂರು (Kuruburu) ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ (Milk Producers Cooperative Society – MCS) ಸೋಮವಾರ ನೂತನ ಆಡಳಿತ ಮಂಡಳಿಯನ್ನು (Management Board) ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ (President) ಕೆ.ವಿ.ಮಂಜುನಾಥ ಶರ್ಮ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಕೆ.ಎನ್.ಕೃಷ್ಣಪ್ಪ, ನಿರ್ದೇಶಕ ಕೆ.ಎನ್.ನಟರಾಜ್, ಕೆ.ವಿ.ಸತೀಶ್, ಕೆ.ವಿ.ರಾಮಕೃಷ್ಣಪ್ಪ, ಕೆ.ವಿ.ಚನ್ನೇಗೌಡ, ಕೆ.ಸಿ.ನಾರಾಯಣ ಸ್ವಾಮಿ, ಸಾವಿತ್ರಮ್ಮ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ವಿ.ಮಂಜುನಾಥ ಶರ್ಮ “ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು ಬರಗಾಲದಲ್ಲಿ, ಕೊರೊನಾ (Carona) ಸಂಕಷ್ಟ ಸಮಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟ ಸ್ಥಗಿತವಾಗದೆ ಹೈನುಗಾರಿಕೆ ಹಲವಾರು ಕುಟುಂಬಗಳ ರಕ್ಷಣೆ ಮಾಡಿತು” ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸದಸ್ಯ ಮಂಜುನಾಥಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ, ಕೆ.ಎಂ.ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ.ಶ್ರೀನಿವಾಸಗೌಡ, ಕೆ.ಎ.ನಂಜೇಗೌಡ ಕೆ.ಎನ್.ರಮೇಶ್, ಆರ್.ನಂಜೇಗೌಡ, ಕೆ.ಆರ್.ಶಂಕರ್ ನಾಯಕ್, ಕೆ.ಸಿ.ಶ್ರೀಧರ್, ಕೆ.ಎನ್.ಶ್ರೀನಿವಾಸ, ಟೈಲರ್ ಕೆ.ಎ.ಪ್ರಭಾಕರ್, ನಾಗರಾಜಪ್ಪ, ಕೆ.ಎಚ್.ರಾಮಚಂದ್ರಗೌಡ, ನಾಮಲು ಶ್ರೀನಿವಾಸ, ಜೆ.ಟಿ.ಮಲ್ಲಿಕಾರ್ಜುನ, ಅಶೋಕ್ ಉಪಸ್ಥಿತರಿದ್ದರು.