Chelur : ಚೇಳೂರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ (Government High School) ಕಾನೂನು ಅರಿವು ನೆರವು (Law Awareness Programme) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚೇಳೂರು ಸರ್ಕಲ್ ಇನ್‌ಸ್ಪೆಕ್ಟರ್ (Chelur Police Circle Inspector) ಸಿ.ರವಿಕುಮಾರ್, ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹವನ್ನು (Child Marriage) ತಡೆಗಟ್ಟಲು, ತಂಬಾಕು ನಿಷೇಧ (Tabaco Ban) , ಸಂಚಾರಿ ನಿಯಮ (Traffic Rules) , ವೇಶ್ಯಾವಾಟಿಕೆಗಳ (Prostitution) ಬಗ್ಗೆ ಮಕ್ಕಳಿಗೆ ಅರಿವು ನೀಡಿ, ” ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಲ್ಲಿ ಸಾಮಾನ್ಯ ಕಾನೂನಿನ ಅರಿವನ್ನು ಪಡೆಯುವುದು ಮುಖ್ಯ. ವಿದ್ಯಾರ್ಥಿಗಳು ಕಠಿಣ ಶ್ರಮ ಹಾಗೂ ಕ್ರಿಯಾಶೀಲರಾಗಿ ತಮ್ಮ ಗುರಿಗಳನ್ನು ಸಾಧಿಸುವತ್ತ ಹೆಚ್ಚು ಗಮನವಹಿಸಬೇಕು” ಎಂದು ಹೇಳಿದರು.
PSI ಹರೀಶ್, ಎಎಸ್‍ಐ ಡಿ.ಜೆ.ನಾಗರಾಜ್, ಶಾಲಾ ಮುಖ್ಯ ಶಿಕ್ಷಕರಾದ ಜಿಲಾನ್‍ಬಾಷ, ಸಹ ಶಿಕ್ಷಕ ಪಿ.ಜಿ.ವೆಂಕಟರಾಮರೆಡ್ಡಿ, ರಾಮಾನಾಯ್ಕ್, ವೈ.ಎನ್.ನಾಗಮಣಿ, ಬಿ.ರಾಮು, ಸುಬ್ಬರಾಯಪ್ಪ, ಬಾಬಜಾನ್ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur