Gudibande : ಗುಡಿಬಂಡೆ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಹಯೋಗದಲ್ಲಿ ಗುಡಿಬಂಡೆ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ (Lok Adalath) ಕಾರ್ಯಕ್ರಮ ನಡೆಸಲಾಯಿತು. ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 8, ಜನನ ಹಾಗೂ ಮರಣಕ್ಕೆ ಸಂಬಂಧಪಟ್ಟ 66 ಪ್ರಕರಣ ಸೇರಿದಂತೆ ಬಾಕಿ ಇದ್ದ 746 ಪ್ರಕರಣ ಪೈಕಿ 310ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಈ ಸಂದರ್ಭದಲ್ಲಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನ್ನಗೌಡ ಮಾತನಾಡಿ “ಕೋರ್ಟ್ ಮೆಟ್ಟಿಲೇರಿ ವಿವಾದ ಬಗೆಹರಿಸಿಕೊಳ್ಳಲು ಕಾಯುವ ಬದಲು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ವೇದಿಕೆಯಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ.ಸಿ. ಅಶ್ವತ್ಥರೆಡ್ಡಿ, ಉಪಾಧ್ಯಕ್ಷ ಕೆ.ಆರ್. ಮಂಜುನಾಥ, ಕಾರ್ಯದರ್ಶಿ ಸಿ.ವಿ. ಮಂಜುನಾಥ, ಖಜಾಂಚಿ ಎನ್. ಬಾಬು, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ಪಟ್ಟಣ ಪಂಚಾಯಿತಿ ಬಾಲಪ್ಪ, ನ್ಯಾಯಾಲಯದ ಶಿರಸ್ತೆದಾರ್ ಸತೀಶ್, ವಕೀಲರಾದ ರಾಮನಾಥ ರೆಡ್ಡಿ, ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ನಂದೀಶ್ವರ ರೆಡ್ಡಿ, ಉಪಸ್ಥಿತರಿದ್ದರು.
