Home News Malur | Maluru ಟೆಂಪೊ ಟ್ರಾವೆಲರ್ ಕಾರು ಅಪಘಾತ : 15 ಮಂದಿಗೆ ಗಾಯ

ಟೆಂಪೊ ಟ್ರಾವೆಲರ್ ಕಾರು ಅಪಘಾತ : 15 ಮಂದಿಗೆ ಗಾಯ

0
481
Chikkaballapur District Chintamani Bolero Car Bike road Accident

Malur : ಮಾಲೂರು ತಾಲೂಕ್ಕಿನ ಸೀತನಾಯಕನಹಳ್ಳಿ ಗ್ರಾಮದ (Seethanayakanahalli) ಬಳಿ ಭಾನುವಾರ ಟೆಂಪೊ ಟ್ರಾವೆಲರ್ (ಟಿ.ಟಿ) (Tempo Travller) ಮತ್ತು ಕಾರಿನ (Car) ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಬೆಂಗಳೂರಿನ ನಾಗವಾರ ನಿವಾಸಿಗಳು 15 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ನಾಗವಾರದ ಮಂಜುನಾಥ್ ಟೆಂಪೊ ಟ್ರಾವೆಲರ್ನಲ್ಲಿ ಬಂದು ತಮ್ಮ ಸಂಬಂಧಿಕರೊಂದಿಗೆ ತಾಲ್ಲೂಕಿನ ಮಿಣಸಂದ್ರ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗುವಾಗ ಸೀತನಾಯಕನಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಟಿ.ಟಿಯಲ್ಲಿದ್ದ ಮಮತಾ, ಗೌರಮ್ಮ, ರಾಧಮ್ಮ, ಯಶೋದಮ್ಮ, ಚಾಲಕ ಮಹಮ್ಮದ್ ಆಸಿಫ್ ಹಾಗೂ ಸಿಂಧೂ ಹಾಗೂ ಚಂದನ್ ಎಂಬ ಮಕ್ಕಳಿಗೆ ಗಾಯಗಳಾಗಿದ್ದು ಕಾರಿನಲ್ಲಿದ್ದ ಮಿಣಸಂದ್ರ ಗ್ರಾಮದ ಲಕ್ಷ್ಮಮ್ಮ ಹಾಗೂ ವೆಂಕಟೇಶ್ ದಂಪತಿಗೆ ಸಹ ಗಾಯಗಳಾಗಿವೆ.

ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳಿಗೆ ಮಾಲೂರಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!