Home News Chikkaballapur ಮಂಡಿಕಲ್ಲು ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ

ಮಂಡಿಕಲ್ಲು ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ

0
571
Chikkaballapur taluk Mandikal gram panchayat Rural Sports Meet

Mandikal, Chikkaballapur : ಮಂಡಿಕಲ್ಲು ಗ್ರಾಮ ಪಂಚಾಯಿತಿ ವತಿಯಿಂದ ಮಂಡಿಕಲ್ಲು ಗ್ರಾಮದಲ್ಲಿ ಸೋಮವಾರ ಗ್ರಾಮೀಣ ಕ್ರೀಡಾಕೂಟ (Rural Sports Meet) ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಆಶಾ “ಸ್ವಾಸ್ಥ್ಯ ಸಮಾಜಕ್ಕೆ ಕ್ರೀಡೆ ಅಗತ್ಯವಿದ್ದು ಕ್ರೀಡಾಕೂಟದಲ್ಲಿ ಗ್ರಾಮೀಣ ಯುವಕ ಯುವತಿಯರು ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಕ್ರೀಡೆಗಳು ಸಮಾಜವನ್ನು ಮತ್ತು ಮನುಷ್ಯನ ಆರೋಗ್ಯವನ್ನು ಪರಿಪೂರ್ಣವಾಗಿ ಇಡುತ್ತದೆ, ಕ್ರೀಡಾಪಟುಗಳಿಗೆ ಸೋಲು ಗೆಲುವು ಮುಖ್ಯ ಆಗಬಾರದು” ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶಂಷದ್ ಬಾನು, ಸುನಿಲ್, ಮಂಜುನಾಥ್, ಆನಂದ್, ಫಯಾಜ್ ಅಹಮದ್, ರಹಮತ್ತುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕ ಸತ್ಯನಾರಾಯಣ, ವೀಣಾ ಮತಿತ್ತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!