Chikkaballapur : ಮಾವಿನ (Mango) ಹಣ್ಣಿನ ನೊಣದ (Fruit Fly) ಬಾಧೆಯಿಂದ ಇಳುವರಿ ನಷ್ಟ ಹಾಗೂ ಗುಣಮಟ್ಟ ಹಾಳಾಗಿ ಬೆಲೆ ಕುಸಿತಕ್ಕೆ ಕಾರಣವಾಗಿ ಬೆಳೆಗಾರರಿಗೆ ಅಪಾರ ನಷ್ಟವಾಗುತ್ತಿರುವ ಹಿನ್ನೆಲೆ ಮಾವಿನ ಹಣ್ಣಿಗೆ ನೊಣದ ಬಾಧೆಯನ್ನು ನಿಯಂತ್ರಿಸುವ ಮೋಹಕ ಬಲೆಯನ್ನು (Pheromone trap) ಮಾವು ಅಭಿವೃದ್ಧಿ ನಿಗಮದಿಂದ ಸಹಾಯಧನದಲ್ಲಿ ವಿತರಿಸಲು ಆಸಕ್ತ ಮಾವು ಬೆಳೆಗಾರರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರೈತರು ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಜೆರಾಕ್ಸ್ ಪ್ರತಿ, ಎರಡು ಭಾವಚಿತ್ರ, ಬೆಳೆ ದೃಢೀಕರಣದ ದಾಖಲೆಗಳೊಂದಿಗೆ ಮಾಡಿಕೆರೆಯ ಮಾವು ಅಭಿವೃದ್ಧಿ ಮಂಡಳಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು/ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮ/ಮಾವು ಅಭಿವೃದ್ಧಿ ಕೇಂದ್ರ, ಮಾಡಿಕೆರೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://ksmdmcl.karnataka.gov.in/
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur