Bagepalli : ಬಾಗೇಪಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಕ್ಷರ ಫೌಂಡೇಷನ್ ಆಶ್ರಯದಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ (Mathematics Learning Program) ನಡೆಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೆಂಕಟರಾಮಪ್ಪ “4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಗಣಿತ ವಿಷಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಗಣಿತ ಕಲಿಕಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಇದರಿಂದ ಸತತ ಅಭ್ಯಾಸದಿಂದ ಗಣಿತದ ಲೆಕ್ಕಗಳನ್ನು ನಿರರ್ಗಳವಾಗಿ ಮಾಡಬಹುದು” ಎಂದರು.
ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ನವೀನ್, ಶಿಕ್ಷಣ ಅಧಿಕಾರಿ ಕುಶಲ್ ಕುಮಾರ್, ಶಿಕ್ಷಕ ಪಿ.ಎ.ನಾರಾಯಣಸ್ವಾಮಿ, ಜಂಗಮಶ್ರೀನಿವಾಸ್, ಸಿ.ನಾರಾಯಣಸ್ವಾಮಿ, ಎಲ್.ರವಿ, ಶಿಕ್ಷಕಿ ಸಂಧ್ಯಾ, ವರಲಕ್ಷ್ಮಿ, ಮಂಜುಳ ಮತ್ತಿತ್ತರರು ಉಪಸ್ಥಿತರಿದ್ದರು.