28.8 C
Bengaluru
Saturday, February 28, 2026

ಮೇಲೂರಿನ ಎಂ.ಪುನೀತ್‌ಗೆ 12 ವರ್ಷದೊಳಗಿನವರ ಟೆನ್ನಿಸ್‌ನಲ್ಲಿ ನ್ಯಾಷನಲ್ ಚಾಂಪಿಯನ್ ಪಟ್ಟ

- Advertisement -
- Advertisement -

Sidlaghatta : ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್(AITA) 12 ವರ್ಷದೊಳಗಿನ ಆಟಗಾರರ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ವಾಸಿ ಲಾನ್ ಟೆನ್ನೀಸ್ ಆಟಗಾರ 11 ವರ್ಷದ ಎಂ.ಪುನೀತ್ ಫಸ್ಟ್ ರ್ಯಾಂಕ್‌ನ ಪಟ್ಟ ಮುಡಿಗೇರಿಸಿಕೊಂಡಿದ್ದಾನೆ.

ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಕಾರಿಗಳಾದ ಮೇಲೂರು ಗ್ರಾಮದ ವಾಸಿ ಡಾ.ಮನೋಹರ್ ಹಾಗೂ ನಮ್ರತಾ ದಂಪತಿಗಳ ಪುತ್ರನಾದ ಎಂ.ಪುನೀತ್ ಸಧ್ಯ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಆರನೇ ತರಗತಿ ಓದುತ್ತಿದ್ದು ಸಿಂಗಲ್ ಮತ್ತು ಡಬಲ್ಸ್‌ ನ ಲಾನ್ ಟೆನ್ನಿಸ್ ಆಟಗಾರನಾಗಿದ್ದಾನೆ.

ಇತ್ತೀಚೆಗಷ್ಟೆ ಮುಂಬೈನಲ್ಲಿರುವ ಮಹಾರಾಷ್ಟ್ರ ಸ್ಟೇಟ್ ಲಾನ್ ಟೆನ್ನಿಸ್ ಅಸೋಸಿಯೇಷನ್‌ ನ ಆಟದ ಮೈದಾನದಲ್ಲಿ ರಮೇಶ್ ದೇಸಾಯಿ ಸ್ಮರಣಾರ್ಥ ನಡೆದ 18ನೇ ವರ್ಷದ ಸ್ಪರ್ಧೆಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನ ಟೆನ್ನಿಸ್ ಪಂದ್ಯಾವಳಿಯಲ್ಲಿ ಎಂ.ಪುನೀತ್ ಗೆದ್ದು ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದ.

ಇದೀಗ ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್‌ ನ ರ್ಯಾಂಕಿಂಗ್ ಪಟ್ಟಿಯಲ್ಲಿ 12 ವರ್ಷದೊಳಗಿನವರಲ್ಲಿ ದೇಶಕ್ಕೆ ನಂಬರ್ ಒನ್ ಆಗಿ ಹೊರಹೊಮ್ಮಿದ್ದಾನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!