Home News Chikkaballapur ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0
1015
Morarji Desai Residential School Application

Chikkaballapur : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) , ಬಾಗೇಪಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ) ಹಾಗೂ ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿಯ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ)ಯಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದ್ದು https://sevasindhuservices.karnataka.gov.in ಮೂಲಕ ಅರ್ಜಿಗಳನ್ನು (application) ಸಲ್ಲಿಸಬಹುದು.

ಶೇ 75 ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ ಶೇ 25 ರಷ್ಟು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಅನುಗುಣವಾಗಿ ಹಾಗೂ ರೋಸ್ಟರ್ ನಿಯಮದಂತೆ ಪ್ರವೇಶ ನೀಡಲಾಗುತ್ತದೆ.

ಮಾಹಿತಿ ಹಾಗೂ ಅರ್ಜಿಗಳನ್ನು ಸಲ್ಲಿಸಲು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ‌ ಕಚೇರಿ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ. 08156-277049, ಪ್ರಾಂಶುಪಾಲರು ಪೆರೇಸಂದ್ರ ಮತ್ತು ಬಾಗೇಪಲ್ಲಿ 9686200416, ಪ್ರಾಂಶುಪಾಲರು ಮಸ್ತೇನಹಳ್ಳಿ 9972408072 ಹಾಗೂ ಚಿಂತಾಮಣಿ ಮಾಹಿತಿ ಕೇಂದ್ರ 8746882888, ಶಿಟ್ಲಘಟ್ಟ 9739426396, ಗೌರಿಬಿದನೂರು 8867760346, ಬಾಗೇಪಲ್ಲಿ 8123318947, ಗುಡಿಬಂಡೆ 7204915866, ಚಿಕ್ಕಬಳ್ಳಾಪುರ 7204453320 ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!